News Karnataka Kannada
Sunday, May 12 2024
ತೆಲುಗು

ಮಗಳಿಗೆ ‘ಕ್ಲಿನ್ ಕಾರ’ ಎಂದು ನಾಮಕರಣ ಮಾಡಿದ ರಾಮ್ ಚರಣ್-ಉಪಾಸನಾ

baby klin kaara
Photo Credit : Twitter

ಇತ್ತೀಚಿಗಷ್ಟೆ ಮುದ್ದಾದ ಹೆಣ್ಣು ಮಗುವನ್ನು ಸ್ವಾಗತಿಸಿದ ಟಾಲಿವುಡ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಇದೀಗ ನಾಮಕರಣ ಮಾಡಿದ್ದಾರೆ. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಮುದ್ದಾದ ಮಗುವಿಗೆ ಹೆಸರಿಟ್ಟಿದ್ದಾರೆ. ಜೂನ್ 20ರಂದು ಬೆಳಗ್ಗೆ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ಶುಭಾಶಯಗಳ ಸುರಿಮಳೆಯೇ ಹರಿದುಬಂದಿದೆ. ಹೈದರಾಬಾದ್‌ ಅಪೋಲೋ ಆಸ್ಪತ್ರೆಯಲ್ಲಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗುವಿಗೆ ಜನ್ಮ ನೀಡಿ 3 ದಿನಗಳ ಬಳಿಕ ಉಪಾಸನಾ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದು ಇದೀಗ ನಾಮಕರಣ ಸಂಭ್ರಮ ಮಾಡಿದ್ದಾರೆ.

ಅಂದಹಾಗೆ ಮಗಳಿಗೆ ‘ಕ್ಲಿನ್ ಕಾರ ಕೊನಿಡೆಲಾ’ ಎಂದು ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಚಿರಂಜೀವಿ ಕುಟುಂಬ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಕ್ಲಿನ್ ಕಾರಾ ಎಂದರೆ ದೈವಿಕ ತಾಯಿ ಶಕ್ತಿ ಎನ್ನುವ ಅರ್ಥವಿದೆ. ಅಂದಹಾಗೆ ಈ ಹೆಸರನ್ನು ಲಲಿತಾ ಸಹಸ್ರನಾಮದಿಂದ ತೆಗೆದುಕೊಳ್ಳಲಾಗಿದೆ ಎಂದು ಬಹಿರಂಗ ಪಡಿಸಿದ್ದಾರೆ. ‘ಕ್ಲಿನ್ ಕಾರ’ ಪ್ರಕೃತಿಯ ಸಾಕಾರವನ್ನು ಪ್ರತಿನಿಧಿಸುತ್ತದೆ. ದೈವಿಕ ತಾಯಿಯಾದ ‘ಶಕ್ತಿ’ಯ ಪರಮ ಶಕ್ತಿಯನ್ನು ಆವರಿಸುತ್ತದೆ. ಮತ್ತು ಶಕ್ತಿಯುತವಾದ ಕಂಪನವನ್ನು ಹೊಂದಿದೆ ಎಂದು ಹೆಸರಿನ ಬಗ್ಗೆ ವಿವರಣೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು