News Karnataka Kannada
Monday, May 13 2024
ತೆಲುಗು

ಪುನೀತ್‌ ರಾಜ್‌ಕುಮಾರ್‌ ಮನೆಗೆ ಭೇಟಿ ನೀಡಿದ ಟಾಲಿವುಡ್‌ ನಟ ಪ್ರಭಾಸ್

Prabhas
Photo Credit :

ನಟ ಪುನೀತ್ ರಾಜ್​ಕುಮಾರ್ ನಿಧನರಾಗಿ ಎರಡು ತಿಂಗಳು ತುಂಬಿದೆ. ಕರುನಾಡು ಈ ಆಘಾತದಿಂದ ಇನ್ನೂ ಹೊರಬಂದಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಇಂದು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಪ್ಪು ಇಲ್ಲ ಎನ್ನುವ ನೋವು ಕೇವಲ ಅವರ ಕರುನಾಡಿಗೆ ಮಾತ್ರ ಸೀಮಿತ ಆಗಿಲ್ಲ.
ಪ್ರಪಂಚದಾದ್ಯಂತ ಅಪ್ಪು ಬಗ್ಗೆ ಎಲ್ಲರೂ ಮಾತನಾಡಿದ್ದಾರೆ.

ಇನ್ನು ಅಪ್ಪುಗೆ ಪರಭಾಷೆ ಚಿತ್ರರಂಗದಲ್ಲಿ ಅಪಾರ ಸ್ನೇಹಿತರನ್ನು ಸಂಪಾದಿಸಿದ್ದಾರೆ. ಅಪ್ಪು ಇಲ್ಲವಾದ ವಿಚಾರ ಕೇಳಿ ಸ್ಟಾರ್‌ನಟರುಗಳು ಕಣ್ಣೀರು ಹಾಕಿದ್ದಾರೆ. ಬೆಂಗಳೂರಿಗೆ ಬಂದು ಅಪ್ಪು ಸಮಾಧಿಗೆ ಭೇಟಿ ನೀಡಿ ನಮಿಸಿದ್ದಾರೆ. ಅಷ್ಟೇ ಅಲ್ಲ ಅಪ್ಪು ಜೊತೆಗೆ ತಮಗೆ ಇರುವ ನಂಟು ಮತ್ತು ಒಡನಾಟದ ಬಗ್ಗೆ ಹಂಚಿಕೊಂಡಿದ್ದಾರೆ.

ಇನ್ನೂ ಕೂಡ ಪುನೀತ್‌ ರಾಜ್‌ಕುಮಾರ್ ಅವರನ್ನು ಎಲ್ಲರೂ ನಿತ್ಯ ಸ್ಮರಿಸುತ್ತಲೇ ಇದ್ದಾರೆ. ಟಾಲಿವುಡ್‌ ನಟ ಪ್ರಭಾಸ್ ಬೆಂಗಳೂರಿಗೆ ಬಂದು ಅಪ್ಪು ಅವರ ಮನೆಗೆ ಭೇಟಿ ಕೊಟ್ಟು, ಕುಟುಂಬದ ಜೊತೆಗೆ ಮಾತನಾಡಿದ್ದಾರೆ.

ಅಪ್ಪು ಅಗಲಿ ಎರಡು ತಿಂಗಳು ಕಳೆದಿದೆ. ಆದರೆ ಅಪ್ಪು ಒಂದಲ್ಲಾ ಒಂದು ರೂಪದಲ್ಲಿ ಪ್ರತಿ ನಿತ್ಯ ಜನರ ನಡುವೆ ಅಪ್ಪು ಹೆಸರು ಓಡಾಡುತ್ತಲೇ ಇದೆ. ಇನ್ನು ಅವರನ್ನು ನಿತ್ಯ ಸ್ಮರಿಸುವ ಕಾರ್ಯವೂ ಸಾಗಿದೆ. ನಟ ಪ್ರಭಾಸ್‌ ಪುನೀತ್‌ ರಾಜ್‌ಕುಮಾರ್‌ ಮನೆಗೆ ಭೇಟಿ ನೀಡಿದ್ದಾರೆ. ನಿನ್ನೆ (ಡಿಸೆಂಬರ್ 28) ಅಪ್ಪು ಅವರ ಮನೆಗೆ ಪ್ರಭಾಸ್‌ ಭೇಟಿ ನೀಡಿ ಕುಟುಂಬಸ್ಥರ ಜೊತೆಗೆ ಮಾತು ಕಥೆ ನಡೆಸಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಅವರಿಗೆ ಸಾಂತ್ವನ ಹೇಳಿ ಹೋಗಿದ್ದಾರೆ ಪ್ರಭಾಸ್.

ಇನ್ನು ನಟ ಪ್ರಭಾಸ್ ಅವರ ಹುಟ್ಟು ಹಬ್ಬಕ್ಕೆ ನಟ ಪುನೀತ್‌ ರಾಜ್‌ಕುಮಾರ್ ಶುಭ ಕೋರಿದ್ದರಂತೆ. ಅವರಿಗೆ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರಂತೆ ಅಪ್ಪು. ಈ ವಿಚಾರವನ್ನು ಕೂಡ ಪ್ರಭಾಸ್, ಕುಟುಂಬದೊಂದಿಗೆ ಹಂಚಿಕೊಂಡಿದ್ದಾರೆ ಎನ್ನುವುದು ತಿಳಿದು ಬಂದಿದೆ. ಬೇರೆ ನಟರ ಹಾಗೆ ಪ್ರಭಾಸ್‌ಗೂ ಅಪ್ಪು ಹತ್ತಿರ ಆಗಿದ್ದರು. ಹಾಗಾಗಿ ಪ್ರಭಾಸ್ ಸಮಯ ಮಾಡಿಕೊಂಡು ಬೆಂಗಳೂರಿನಲ್ಲಿ ಇರುವ ಅಪ್ಪು ಮನೆಗೆ ಭೇಟಿ ನೀಡಿ ಕುಟುಂಬದವರನ್ನು ಭೇಟಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು