ಬೆಂಗಳೂರು: ಪ್ರಶಾಂತ್ ನೀಲ್ ಇದೀಗ ‘ಸಲಾರ್’ ಚಿತ್ರದ ಮೂಲಕ ಮತ್ತೊಮ್ಮೆ ಮ್ಯಾಜಿಕ್ ಮಾಡಲು ಮುಂದಾಗುತ್ತಿದ್ದಾರೆ.
ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ‘ಸಲಾರ್: ಭಾಗ 1’ ಡಿಸೆಂಬರ್ 22ರಂದು ಬಿಡುಗಡೆಯಾಗಲಿದೆ. ಈಗ ‘ಸಲಾರ್’ ಸಿನಿಮಾಗೆ ಸೆನ್ಸಾರ್ ಬೋರ್ಡ್ನಿಂದ ‘ಎ’ ಸರ್ಟಿಫಿಕೇಟ್ ನೀಡಲಾಗಿದೆ. ಹಾಗಾಗಿ ಈ ಸಿನಿಮಾದಲ್ಲೂ ಕ್ರೌರ್ಯ ಅಬ್ಬರಿಸಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.
`ಎ’ ಸರ್ಟಿಫಿಕೇಟ್ ಸಿಕ್ಕರೆ 18 ವರ್ಷಕ್ಕಿಂತ ಕಿರಿಯರು ಆ ಸಿನಿಮಾವನ್ನು ನೋಡುವಂತಿಲ್ಲ. ಇದರಿಂದ ಮಕ್ಕಳ ಜತೆ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ತೊಂದರೆ ಆಗಲಿದೆ. ಹೀಗಾಗಿ ಸಲಾರ್ ಸಿನಿಮಾ ಉತ್ತಮ ಕಲೆಕ್ಷನ್ ಮಾಡೋದು ಡೌಟ್ ಅಂತಿದ್ದಾರೆ.
ಕೆಜಿಎಫ್ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್ ನ ವಿಜಯ್ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಶ್ರುತಿ ಹಾಸನ್, ಜಗಪತಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Censor done for #SalaarCeaseFire 🔥
Get ready for an intense ‘𝐀’ction drama in cinemas from December 22nd 💥#Salaar #Prabhas #PrashanthNeel @PrithviOfficial @shrutihaasan @VKiragandur @hombalefilms @IamJagguBhai @sriyareddy @bhuvangowda84 @RaviBasrur @vchalapathi_art @anbariv… pic.twitter.com/OdP97BN0GZ
— Hombale Films (@hombalefilms) December 11, 2023