ಪ್ರಭಾಸ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್ ಭಾಗ-1’ ಚಿತ್ರದ ಟೀಸರ್ ಇಂದು ಮುಂಜಾನೆ 5.12ಕ್ಕೆ ಬಿಡುಗಡೆಗೊಂಡಿದ್ದು, ಚಿತ್ರದ ಟೀಸರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಟೀಸರ್ ರಿಲೀಸ್ ಆಗಿ 15 ನಿಮಿಷಕ್ಕೇ 1 ಲಕ್ಷಕ್ಕೂ ಅಧಿಕ ವ್ಯೂಸ್ ಕಂಡುಬಂದಿದೆ.ಎರಡು ಭಾಗಗಳಲ್ಲಿ ಚಿತ್ರ ಬಿಡುಗಡೆಯಾಗುವ ಬಗ್ಗೆ ಟೀಸರ್ನಲ್ಲಿ ಚಿತ್ರತಂಡ ಬಹಿರಂಗಗೊಳಿಸಿದೆ.
ಇಂದು ಬಿಡುಗಡೆಯಾದ ‘ಸಲಾರ್ ಭಾಗ 1- ಸೀಸ್ಫಿಯರ್’ ಟೀಸರ್ನಲ್ಲಿ ಪ್ರಭಾಸ್ ಅವರನ್ನು ಜುರಾಸಿಕ್ ಪಾರ್ಕ್ನ ಭಯಾನಕ ಡೈನೋಸರ್ಗೆ ಹೋಲಿಸಲಾಗಿದೆ. ಟೀಸರ್ನಲ್ಲಿ ಟಿನ್ನು ಆನಂದ್ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಬ್ಯಾಕ್ ರೌಂಡ್ ಮ್ಯೂಸಿಕ್ ಟೀಸರ್ಗೆ ಮತ್ತಷ್ಟು ಖದರ್ ನೀಡಿದೆ. ಪ್ರಭಾಸ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆಇದೇ ವರ್ಷ ಸೆಪ್ಟೆಂಬರ್ 28ಕ್ಕೆ ವಿಶ್ವಾದ್ಯಂತ ತೂಫಾನ್ ಎಬ್ಬಿಸಲಿದೆ ಎಂದು ನಿರೀಕ್ಷಿಸಲಾಗಿದೆ. ʼಪಾರ್ಟ್ 1 ಕದನ ವಿರಾಮʼ ಎಂದು ಹೊಂಬಾಳೆ ಸಂಸ್ಥೆ ಹೇಳಿದೆ.