ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ಸಲಾರ್ ಸಿನಿಮಾ ನಿನ್ನೆಯಷ್ಟೇ ವಿಶ್ವದಾದ್ಯಂತ ರಿಲೀಸ್ ಆಗಿದೆ. ಇದೀಗ ಸಲಾರ್ ಅಧಿಕೃತ ಎಕ್ಸ್ ಖಾತೆಯಲ್ಲಿ ಒಂದು ದಿನದ ವಿಶ್ವದ ಗಳಿಕೆಯನ್ನು ಪೋಸ್ಟ್ ಮಾಡಲಾಗಿದೆ. ಮೊದಲ ದಿನ ಸಲಾರ್ ಚಿತ್ರ 178.7 ಕೋಟಿ ಗಳಿಸಿದೆ ಎಂದು ಘೋಷಿಸಿದೆ.
ಈ ಮೂಲಕ ‘ಸಲಾರ್’ ಚಿತ್ರ ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ. ಯಾವ ಸಿನಿಮಾಗಳೂ ಇಲ್ಲಿಯವರೆಗೆ ಮಾಡದಷ್ಟು ಗಳಿಕೆ ಮಾಡಿವೆ. ಈ ಚಿತ್ರದಿಂದ ಹೊಂಬಾಳೆ ಫಿಲ್ಮ್ಸ್ಗೆ ಭರ್ಜರಿ ಲಾಭ ಆಗಿದೆ.
ಇನ್ನೂ ವಿಶ್ವದ್ದು 178.7 ಕೋಟಿ ರೂಪಾಯಿ ಗಳಿಕೆಯಾದರೆ, ಇಂಡಿಯನ್ ಬಾಕ್ಸ್ ಆಫೀಸಿನಲ್ಲಿ ಅಂದಾಜು 95 ಕೋಟಿ ರೂಪಾಯಿ ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ.