ನವದೆಹಲಿ: ಯುವಜನರಿಗೆ ಇತ್ತೀಚೆಗೆ ರೀಲ್ಸ್ ಹುಚ್ಚು ಹೆಚ್ಚಾಗಿದೆ. ಅದರಲ್ಲಿಯೂ ರೀಲ್ಸ್ ಮಾಡೋ ಭರದಲ್ಲಿ ಸಾರ್ವಜನಿಕರಿಗೆ ತೊಂದರೆಕೊಡುವಂತಹ ಪ್ರಸಂಗಗಳು ಬಹಳ ಹೆಚ್ಚಾಗಿವೆ. ಇಲ್ಲೊಬ್ಬಳು ಕಾಲೇಜು ಯುವತಿ ಹೆದ್ದಾರಿ ಮಧ್ಯೆಯೇ ಡಾನ್ಸ್ ಮಾಡುವ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದಾಳೆ.
ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಇದೆಂತಹ ಹುಚ್ಚಾಟ ಎಂದು ಯುವತಿಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಗೌರಂಗ್ ಭಾರಧ್ವಾಜ್ (@GaurangBharawa1) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ಯುವತಿಯೊಬ್ಬಳ ರಸ್ತೆ ಮಧ್ಯೆ ಡಾನ್ಸ್ ಮಾಡುತ್ತಾ ಹುಚ್ಚಾಟ ಮೆರೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ವೈರಲ್ ವಿಡಿಯೋದಲ್ಲಿ ಹೆದ್ದಾರಿಯೊಂದರಲ್ಲಿ ಸಾರ್ವಜನಿಕರು ರಸ್ತೆ ದಾಟಲು ಟ್ರಾಫಿಕ್ ಸಿಗ್ನಲ್ ಬಿದ್ದ ವೇಳೆಯಲ್ಲಿ ಕಾಲೇಜು ಯುವತಿಯೊಬ್ಬಳು, ತನ್ನ ಭುಜದ ಮೇಲಿದ್ದ ಬ್ಯಾಗನ್ನು ಎಸೆದು, ರಸ್ತೆ ಮಧ್ಯೆ ಬಂದು ಡಾನ್ಸ್ ಮಾಡುತ್ತಾ, ಹುಚ್ಚಾಟ ಮೆರೆಯುತ್ತಿರುವಂತಹ ದೃಶ್ಯಾವಳಿಯನ್ನು ಕಾಣಬಹುದು.
इंटरनेट महँगा ही अच्छा था। 🤦♂️ pic.twitter.com/QFPI5a7Q4d
— Raja Babu (@GaurangBhardwa1) December 22, 2023