News Karnataka Kannada
Saturday, April 27 2024
ಮಲಯಾಳಂ

ಮಲಯಾಳಂನ ‘ಟರ್ಬೋ’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ

Raj B in Malayalam film 'Turbo'. Shetty
Photo Credit : News Kannada

ಬೆಂಗಳೂರು: ಮಲಯಾಳಂ ನಟ ಮಮ್ಮೂಟಿ ಅವರೇ ನಿರ್ಮಾಣ ಮಾಡಿ  ನಟಿಸುತ್ತಿರುವ ‘ಟರ್ಬೋ’ ಸಿನಿಮಾದಲ್ಲಿ ಕನ್ನಡದ ಜನಪ್ರಿಯ ನಟ ರಾಜ್ ಬಿ. ಶೆಟ್ಟಿ ಸೇರ್ಪಡೆ ಆಗಿದ್ದಾರೆ. ಮಮ್ಮೂಟಿ ಕಡೆಯಿಂದಲೇ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ‘ರಾಜ್ ಬಿ. ಶೆಟ್ಟಿ ಅವರಿಗೆ ಸ್ವಾಗತ’ ಎಂದು ಬರೆಯಲಾಗಿದೆ.

ರಾಜ್ ಬಿ ಶೆಟ್ಟಿ ಅವರು ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ಜನಪ್ರಿಯತೆ ಪಡೆದರು. ಇದಾದ ಬಳಿಕ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, ನಿರ್ದೇಶಿಸಿದ್ದಾರೆ. ಈಗ ಪರಭಾಷೆಯವರೂ ಅವರ ಟ್ಯಾಲೆಂಟ್​ನ ಗುರುತಿಸಿದ್ದಾರೆ. ಅವರು ನಟಿಸಿ, ನಿರ್ದೇಶಿಸಿರುವ ‘ಸ್ವಾತಿ ಮುತ್ತಿನ ಮಳೆಹನಿಯೇ’ ಈ ವಾರ ರಿಲೀಸ್ ಆಗುತ್ತಿದೆ.

‘ಟರ್ಬೋ’ ಸಿನಿಮಾ ವೈಶಾಖ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ವೈಶಾಖ್ ಹಾಗೂ ಮಮ್ಮೂಟಿ ಜೊತೆ ಅವರು ‘ಪೊಕಿರಿ ರಾಜ’ ಹಾಗೂ ‘ಮಧುರ ರಾಜ’ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾ ಆ್ಯಕ್ಷನ್ ಕಾಮಿಡಿ ಶೈಲಿಯಲ್ಲಿ ಮೂಡಿಬರುತ್ತಿದೆ. ‘ಟರ್ಬೋ’ ಚಿತ್ರವನ್ನು ದುಲ್ಕರ್ ಸಲ್ಮಾನ್ ಪ್ರೊಡಕ್ಷನ್ ಹೌಸ್ ಹಂಚಿಕೆ ಮಾಡಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು