ಕೊಚ್ಚಿ: ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ಅವರು ತಮ್ಮ ದುಬಾರಿ ಕಾರುಗಳ ಸಂಗ್ರಹಕ್ಕೆ ಹೊಚ್ಚ ಹೊಸ ರೇಂಜ್ ರೋವರ್ ಅನ್ನು ಸೇರ್ಪಡೆಗೊಳಿಸಿದ್ದಾರೆ. 5 ಕೋಟಿ ರೂ. ಮೌಲ್ಯದ ಹೊಸ ರೇಂಜ್ ರೋವರ್ ಕಾರನ್ನು ಖರೀದಿ ಮಾಡಿದ್ದಾರೆ.
ಈ ವೇಳೆ ಅವರ ಪತ್ನಿ ಸುಚಿತ್ರಾ ಮತ್ತುಆಪ್ತರು ಉಪಸ್ಥಿತರಿದ್ದರು. ಈಗಾಗಲೇ ಅವರು ಲಂಬೋರ್ಘಿನಿ, ಟೊಯೋಟಾ ವೆಲ್ಫೈರ್, ಲ್ಯಾಂಡ್ಕ್ರೂಸರ್ ಕಾರನ್ನು ಹೊಂದಿದ್ದಾರೆ. ಮೋಹನ್ ಲಾಲ್ ಈ ಹಿಂದೆ ಚೆನ್ನೈ ನೆಲೆಸಿದ್ದು, ಪ್ರಸ್ತುತ ಕೊಚ್ಚಿಗೆ ಸ್ಥಳಾಂತರಗೊಂಡಿದ್ದಾರೆ. ಮೋಹನ್ಲಾಲ್ ಮತ್ತು ಮಮ್ಮುಟ್ಟಿ ಕಾರು, ಮೊಬೈಲ್ ಸೇರಿದಂತೆ ವಿವಿಧ ದುಬಾರಿ ವಸ್ತುಗಳ ಖರೀದಿಯಲ್ಲಿ ಸ್ಪರ್ಧೆಯಲ್ಲಿದ್ದಾರೆ.