ʼಪೀಟರ್ʼ ಚಿತ್ರ ಏ.10ಕ್ಕೆ ಬಿಡುಗಡೆಯಾಗುತ್ತಿದೆ. ಈ ಹಿಂದೆ ದೂರದರ್ಶನ ಎಂಬ ಸಿನಿಮಾ ಮಾಡಿದ್ದ ಸುಕೇಶ್ ಈಗ ಪೀಟರ್ ಸಿನಿಮಾ ಮಾಡಿದ್ದಾರೆ.
ರವಿ ಹಿರೇಮಠ ಹಾಗೂ ರಾಕೇಶ್ ಹೆಗ್ಡೆ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಾಜೇಶ್ ಧ್ರುವ ಹಾಗೂ ಜಾನ್ವಿ ರಾಯಲ, ರವೀಶಾ ಶೆಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಉಳಿದಂತೆ ರಘು ಪಾಂಡೇಶ್ವರ, ಪ್ರತಿಮಾ ನಾಯಕ್ ಸೇರಿದಂತೆ ಇತರರು ನಟಿಸಿದ್ದಾರೆ. ಪೀಟರ್ ಚಿತ್ರ ಕೇವಲ ಕನ್ನಡದಲ್ಲಷ್ಟೇ ತೆರೆಕಾಣುತ್ತಿಲ್ಲ. ತಮಿಳು, ತೆಲುಗು ಹಾಗೂ ಮಲಯಾಳಂನಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿದೆ.
ಪೀಟರ್ ಸಿನಿಮಾದ ಕಥೆ ಬಗ್ಗೆ ಮಾತನಾಡುವ ನಿರ್ದೇಶಕ ಸುಕೇಶ್, ಇದು ಪ್ರತಿ ಊರಲ್ಲೂ ನಡೆಯುವ ಕಥೆ ಎನ್ನುತ್ತಾರೆ. ಇದು ತುಂಬಾ ಇಂಟೆನ್ಸ್‌ಆದ ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ. ಇಡೀ ಕಥೆ ಹಳ್ಳಿಯೊಂದರಲ್ಲಿ ನಡೆಯುತ್ತದೆ. ಮಿಂಚು, ಗುಡುಗು ಕೂಡಾ ಇಲ್ಲಿ ಪಾತ್ರಗಳಾಗಿವೆ. 40 ದಿನಗಳ ಕಾಲ ಮಡಿಕೇರಿ, ಭಾಗಮಂಡಲ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಒಂದೊಳ್ಳೆಯ ಅನುಭವವಕ್ಕಾಗಿ ಪೀಟರ್ ನೋಡಬಹುದು. ಸೌಂಡಿಂಗ್, ವಿಶ್ಯುವಲ್… ಎಲ್ಲಾ ವಿಚಾರಗಳಲ್ಲೂ ಹೊಸತನ ನೀಡುವ ಸಿನಿಮಾವಿದು.

