News Karnataka Kannada
Saturday, April 27 2024
ಮಲಯಾಳಂ

ನಟ ದುಲ್ಕರ್ ಸಲ್ಮಾನ್ ಸಿನೆಮಾಗಳಿಗೆ ನಿಷೇಧ ಹೇರಿದ ಕೇರಳ ಥಿಯೇಟರ್ ಮಾಲೀಕರು

Dulquer Salman
Photo Credit :

ಮಲಯಾಳಂ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ಚಿತ್ರಕ್ಕೆ ನಿಷೇಧದ ಆತಂಕ ಎದುರಾಗಿದೆ. ಅವರ ಅತೀ ನಿರೀಕ್ಷಿತ ಸಿನಿಮಾ ‘ಸೆಲ್ಯೂಟ್’ ಇನ್ನಷ್ಟೇ ರಿಲೀಸ್ ಆಗಬೇಕಿದೆ. ಈ ಸಿನಿಮಾವನ್ನು ಥಿಯೇಟರ್ ಗೆ ತರದೇ, ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಿದರೆ, ಮುಂದಿನ ಅವರ ಎಲ್ಲಾ ಚಿತ್ರಗಳನ್ನು ಥಿಯೇಟರ್ ಬಾರದಂತೆ ನಿಷೇಧ ಹೇರುವುದಾಗಿ ಫಿಲ್ಮ್ ಎಕ್ಸಿಬಿಟರ್ಸ್ ಯುನೈಟೆಡ್ ಆರ್ಗನೈಸೇಶನ್ ಆಫ್ ಕೇರಳ ಹೇಳಿದೆ.

ಈ ಹಿಂದೆ ‘ಸೆಲ್ಯೂಟ್’ ಚಿತ್ರವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಇದೀಗ ನೇರವಾಗಿಯೇ ಓಟಿಟಿಯಲ್ಲಿ ಬಿಡುಗಡೆ ಮಾಡುವುದಾಗಿ ಒಪ್ಪಂದದಿಂದ ಹಿಂದೆ ಸರಿದಿದೆ. ಹೀಗಾಗಿ ಕೇರಳ ಚಿತ್ರ ಪ್ರದರ್ಶಕರ ಒಕ್ಕೂಟ ಚಿತ್ರತಂಡದ ವಿರುದ್ಧ ಗರಂ ಆಗಿದೆ.

“ಸೆಲ್ಯೂಟ್ ಸಿನಿಮಾ ನಮ್ಮ ಜತೆಗಿನ ಒಪ್ಪಂದಂತೆಯೇ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಬೇಕು. ದುಲ್ಕರ್ ಸಲ್ಮಾನ್ ಮತ್ತು ನಿರ್ಮಾಣ ಸಂಸ್ಥೆಯು ನಿಯಮ ಪಾಲಿಸದೇ ಇದ್ದರೆ, ದೊಡ್ಡ ಪರಿಣಾಮವನ್ನೇ ಎದುರಿಸಬೇಕಾಗುತ್ತದೆ” ಎಂದು ನೇರವಾಗಿಯೇ ನಿಷೇಧದ ಮಾತು ಹೇಳಿದೆ ಫಿಲ್ಮ್ ಎಕ್ಸಿಬಿಟರ್ಸ್ ಯುನೈಟೆಡ್ ಆರ್ಗನೈಸೇಶನ್ ಆಫ್ ಕೇರಳ. ಮಾಧ್ಯಮಗಳೊಂದಿಗೆ ಮಾತನಾ ಡಿರುವ ಒಕ್ಕೂಟದ ಪ್ರತಿನಿಧಿ ಕೆ.ವಿಜಯ ಕುಮಾರ್, “ಥಿಯೇಟರ್ ನಲ್ಲಿ ರಿಲೀಸ್ ಮಾಡುವುದಾಗಿ ಅವರೇ ಸಹಿ ಮಾಡಿಕೊಟ್ಟ ಒಪ್ಪಂದದ ಪತ್ರವಿದೆ. ಈಗ ಅದಕ್ಕೆ ಅವರು ಗೌರವ ಕೊಡುತ್ತಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ನಿಷೇಧದ ಮಾರ್ಗವನ್ನೇ ಹಿಡಿಯಬೇಕಾಗಿದೆ’ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು