News Karnataka Kannada
Wednesday, May 08 2024
ಮನರಂಜನೆ

ತಮ್ಮ ಚೊಚ್ಚಲ ಸಿನಿಮಾ ಬಿಡುಗಡೆಯಾಗುವ ಮೊದಲೇ ನಿಧನರಾದ ಮಾಲಯಾಳಂ ಸಿನಿ ನಿರ್ದೇಶಕ ಜೋಸೆಫ್‌ ಮನು

Malayalam film director Joseph Manu passes away before the release of his debut film
Photo Credit : IANS

ತಿರುವನಂತಪುರಂ: ಮಲಯಾಳಂನ ಸಿನಿಮಾ ನಿರ್ದೇಶಕ ಜೋಸೆಫ್ ಮನು ಜೇಮ್ಸ್ ಅವರು ತಮ್ಮ ಚೊಚ್ಚಲ ಸಿನೆಮಾ ‘ನ್ಯಾನ್ಸಿ ರಾಣಿ’ ಬಿಡುಗಡೆಯಾಗುವ ಮೊದಲೇ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಕೇರಳದ ಕೊಟ್ಟಾಯಂ ಜಿಲ್ಲೆಯ ಕುರವಿಲಂಗಾಡ್‌ನಲ್ಲಿ ಭಾನುವಾರ ಅಂತ್ಯಕ್ರಿಯೆ ನಡೆಯಿತು. ಜೋಸೆಫ್ ಮನು ಜೇಮ್ಸ್ ಅವರು ಆಲುವಾದ ಖಾಸಗಿ ಆಸ್ಪತ್ರೆಯಲ್ಲಿ ಹೆಪಟೈಟಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದು, ಶುಕ್ರವಾರ ನಿಧನರಾದರು. ಅವರು ಇತ್ತೀಚೆಗೆ ತಮ್ಮ ಮೊದಲ ನಿರ್ದೇಶನದ ‘ನ್ಯಾನ್ಸಿ ರಾಣಿ’ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದರು ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನೂ ಪ್ರಗತಿಯಲ್ಲಿವೆ. ಚಿತ್ರದಲ್ಲಿ ಅಹಾನಾ ಕೃಷ್ಣ, ಸನ್ನಿ ವೇಯ್ನ್, ಅಜು ವರ್ಗೀಸ್ ಮತ್ತು ಅರ್ಜುನ್ ಅಶೋಕನ್ ಮುಂತಾದವರು ನಟಿಸಿದ್ದಾರೆ.

2004 ರಲ್ಲಿ ‘ಐ ಆಮ್ ಕ್ಯೂರಿಯಸ್’ ಚಿತ್ರದಲ್ಲಿ ಬಾಲ ನಟನಾಗಿ ವೃತ್ತಿ ಆರಂಭಿಸಿದ ಮನು ಜೋಸೆಫ್ ಮಲಯಾಳಂ, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಜೋಸೆಫ್ ಮನು ಜೇಮ್ಸ್ ಅವರ ಪತ್ನಿ ನೈನಾ ಮತ್ತು ಒಡಹುಟ್ಟಿದವರನ್ನು ಅಗಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು