News Karnataka Kannada
Sunday, April 28 2024
ಉಡುಪಿ

ಕಾರ್ಕಳ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಬೈಕ್ ರ‍್ಯಾಲಿ ಸಮಾರಂಭದಲ್ಲಿ ಅಣ್ಣಾಮಲೈ ಭಾಗಿ

Karkala: Annamalai attends bike rally of BJP's Vijay Sankalp Yatra
Photo Credit : News Kannada

ಕಾರ್ಕಳ: ಕಾರ್ಕಳದಲ್ಲಿ ಬಿಜೆಪಿಯಿಂದ ಚುನಾಯಿತರಾದ ಶಾಸಕರು ರಾಜ್ಯದ ಮಂತ್ರಿಯಾದಾಗಲೆ ಕಾರ್ಕಳವು ಅಭಿವೃದ್ದಿಗೆ ಸಾಕ್ಷಿಯಾಗಿದೆ ಎಂದು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು. ಅವರು ಕಾರ್ಕಳ ತಾಲೂಕಿನ ಅಜೆಕಾರು ಜ್ಯೋತಿ ಹೈಸ್ಕೂಲ್ ಬಳಿಯ ಮೈದಾನ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಬೈಕ್ ರ‍್ಯಾಲಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಬಿಜೆಪಿ ಸರಕಾರವು ರಾಜ್ಯವನ್ನು ಅಭಿವೃದ್ಧಿ ಮಾಡಿದೆ. ಅದರಂತೆಯೆ ಕಾರ್ಕಳಕ್ಕೆ ಬಿಜೆಪಿ ಪಕ್ಷವೆ ಅಭಿವೃದ್ಧಿ ಸಾಕ್ಷಿಯಾಗಿದೆ. ಈ ಬಾರಿ ಸಚಿವ ಸುನೀಲ್ ಕುಮಾರ್ ಒಂದು ಲಕ್ಷ ಅಂತರದಲ್ಲಿ ಚುನಾವಣೆಯಲ್ಲಿ ಗೆಲ್ಲಿಸುವ ನಮ್ಮ ಕಾರ್ಯವಾಗಬೇಕು. ಶಕ್ತಿ ಕೆಂದ್ರದ ಸದಸ್ಯರು ಕಾರ್ಯಕರ್ತರು ಮುಂದಿನ 50 ದಿನಗಳ ಕಾಲ ಮನೆಮನೆಗೆ ತೆರಳಿ ಸಾಧನೆಯನ್ನು ತಿಳಿಸಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ರಾಜ್ಯದಲ್ಲಿ ವಿಧಾನಸೌಧದ ಆಡಳಿತ ಚುಕ್ಕಾಣಿ ಹಿಡಿಯಲು 113 ಇದ್ದ ಮ್ಯಾಜಿಕ್ ನಂಬರನ್ನು ದಾಟಿಸಿ 150 ಶಾಸಕರನ್ನು ಚುನಾಯಿಸಿ ಗೆಲ್ಲಿಸಬೇಕು ಉಡುಪಿ ಜಿಲ್ಲೆಯಲ್ಲಿ, ತಾಲೂಕು ಗಳಲ್ಲಿ ಜಿಲ್ಲಾಡಳಿತ, ಪುರಸಭೆ , ಪಂಚಾಯತ್ ಗಳಲ್ಲಿ ಬೆಜೆಪಿ ಪಕ್ಷನೆ ಇದೆ ಎಲ್ಲಾ ಕಡೆಗಳಲ್ಲಿಯೂ ಬಿಜೆಪಿ ಪಕ್ಷವೆ ಬರಬೇಕು. ಅಗವೆ ಆಡಳಿತ ಸುಸೂತ್ರವಾಗಿ ನಡೆಯಲು ಸಾಧ್ಯ ವಾಗಲಿದೆ ಎಂದರು.

ಈ ಬಾರಿ ಐತಿಹಾಸಿಕ ಬೈಕ್ ರ್ಯಾಲಿ ನಡೆಸಿರೋದು ಕಾಂಗ್ರೇಸ್ ಪಕ್ಷವನ್ನು ಬೆದರಿಸಲು ಅಲ್ಲಾ ಬಿಜೆಪಿ ಕಾರ್ಯಕರ್ತರನ್ನು ಹುರುಪು ತುಂಬಿಸಲು ಆದರೆ ಕಾರ್ಕಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೆ ಇಲ್ಲ ಎಂದು ಅಣ್ಣಾಮಲೈ ವ್ಯಂಗ್ಯವಾಡಿದರು.

ನಾನೇಕೆ ತೇಜಸ್ವಿ ಜೊತೆಗಿರುವೆ ಬಗ್ಗೆ ಮಾಹಿತಿ ಹೊರಹಾಕಿದ ಅಣ್ಣಾಮಲೈ ತೇಜಸ್ವಿ ಸೂರ್ಯ ರಾಷ್ಟ್ರೀಯ ಯುವ ನಾಯಕ ಆತನಲ್ಲಿ ದೇಶದ ಭವಿಷ್ಯದ ಚಿಂತನೆಗಳಿವೆ ಅದಕ್ಕೆ ಹೊಸತನವನ್ನು ಕೊಡುವ ಜಾಣ್ಮೆ ಇದೆ .ನನ್ನ ಚಿಂತನೆಗಳಿಗು ಸಾಮ್ಯಾತೆ ಅವರಲ್ಲಿದೆ ಎಂದರು.

ಕಾರ್ಕಳ ವನ್ನು ನೆನಪಿಸಿದ ಅಣ್ಣಾಮಲೈ: ಕಾರ್ಕಳ ತಾಲೂಕು ನನ್ನ ಮೊದಲ ವೃತ್ತಿಗೆ ದಾರಿ ತೋರಿಸಿದ ಊರು . ಇಲ್ಲಿನ ನಕ್ಸಲ್ ಚಟುವಟಿಕೆ ಸಮಸ್ಯೆಗಳನ್ನು ಹೊಂದಿತ್ತು ಅಂದು ಅಭಿವೃದ್ಧಿ ಯಾಗದೆ ಹಿಂದುಳಿದಿತ್ತು. ಕಳೆದ ಕೆಲವು ವರ್ಷಗಳಲ್ಲಿ ಬದಲಾವಣೆ ಯಾಗಿ ಅಭಿವೃದ್ಧಿಯ ಗಾಳಿ ಬೀಸಿದೆ ರಸ್ತೆಗಳು ಉತ್ತಮವಾಗಿವೆ ನೀರಿನ ಅಣೆಕಟ್ಟುಗಳು ಸಾಕ್ಷಿಯಾಗಿದೆ ಎಂದರು. ಅದಕ್ಕೆ ಬಿಜೆಪಿಯೆ ಸಾಕ್ಷಿ ಎಂದರು. ನಕ್ಸಲ್ ಚಟುವಟಿಕೆ ಸಂಪೂರ್ಣ ಬಂದ್ ಅಗಿದೆ ಎಂದರು.

ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಮಾತನಾಡಿ ರಾಷ್ಟ್ರದ ಲ್ಲಿ ಅತಿ ಹೆಚ್ಚು ವಿಮಾನ ನಿಲ್ದಾಣ ಗಳಿರುವ ರಾಜ್ಯ ಕರ್ನಾಟಕವಾಗಲಿದೆ. ಕಳೆದ ಎಂಟು ವರ್ಷಗಳ ಲ್ಲಿ ಡಬ್ಬಲ್ ಎಂಜಿನ್ ಸರಕಾರದಿಂದ ಇಪ್ಪತ್ತಕ್ಕೂ ಹೆಚ್ಚು ರಾಷ್ಟ್ರೀಯ ಹೆದ್ದಾರಿ ಗಳನ್ನು ನಿರ್ಮಾಣ ಮಾಡಿದೆ. ಡಬಲ್ ಎಂಜಿನ್ ಸರಕಾರದಿಂದ 48% ಜನರಿಗೆ ಜಲಜೀವನ್ ಮಿಷನ್ ಯೋಜನೆಯಿಂದ ನೀರಾವರಿ ಒದಗಿಸಲಿದೆ ಎಂದರು. ಕರಾವಳಿ ತೀರದ ಅಲೆಗಳು ನಿಲ್ಲಬಹುದು ಅದರು ಕಾರ್ಕಳ ಬಿಜೆಪಿ ಕಾರ್ಯಕರ್ತರ ಬೈಕ್ ರ‍್ಯಾಲಿ ನಿಲ್ಲಲ್ಲ ಎಂದು ಯುವಕರಿಗೆ ಹುರಿದುಂಬಿಸಿದರು .ಹಿಂದುತ್ವದ ಹುಲಿ ಸುನೀಲ್ ಕುಮಾರ್ ಯೌವನದಿಂದ ಬಿಜೆಪಿ ಪಕ್ಷ ಕ್ಕೆ ಹುರುಪನ್ನು ತುಂಬಿದವರು ಅವರಿಗೆ ಗೆಲುವು ನಿಶ್ಚಯವಾಗಿದೆ . ಈ ಬಾರಿ ಗೆಲುವಿನ ಅಂತರವನ್ನು ಹೆಚ್ಚಿಸಿ ವಿಜಯ ಯಾತ್ರೆಯಲ್ಲಿ ನಾವೆಲ್ಲರು ಪಾಲ್ಗೊಳ್ಳ ಬೇಕು. ಕಾರ್ಕಳದ ಯುವಕರ ಸಂಘಟನಾತ್ಮಕ ಪ್ರೇರಣೆಯೆ ರಾಜ್ಯಕ್ಕೆ ಪ್ರೇರಣೆಯಾಗಿದೆ ಎಂದರು.

ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ ಸುನೀಲ್ ಕುಮಾರ್ ಮಾತನಾಡಿ ವಿಜಯ ಸಂಕಲ್ಪ ಬೈಕ್ ರ್ಯಾಲಿ ಐತಿಹಾಸಿಕ ವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಕಾರ್ಕಳ ತಾಲೂಕು ಅಭಿವೃದ್ದಿಗೆ ಸಾಕ್ಷಿಯಾಗಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದ 209 ಬೂತುಗಳಲ್ಲಿ ಅಭಿವೃದ್ಧಿ ಪ್ರೇರಣೆಯಾಗಿದೆ. ಸ್ವಚ್ಛ ಕಾರ್ಕಳ ಸ್ವರ್ಣ ಕಾರ್ಕಳವೇ ಶ್ರಿರಕ್ಷೆ ಯಾಗಿದೆ. ಕಾಂಗ್ರೆಸ್ ಗೆ ಅಭಿವೃದ್ದಿಯ ಬಗ್ಗೆ ಮಾತನಾಡಲು ತಯಾರಿಲ್ಲ , ಅವರು ಅಪಪ್ರಚಾರ ಮಾಡುತ್ತಿದ್ದಾರೆ ಅದಕ್ಕೆ ಪ್ರತ್ಯುತ್ತರವಾಗಿ ಉತ್ತರಿಸಿ ಅಭಿವೃದ್ಧಿ ಯನ್ನು ಪ್ರತಿ ಮನೆಮನೆಗೆ ತಿಳಿಸಿ ಎಂದು ಸಚಿವರು ಕಾರ್ಯಕರ್ತರಿಗೆ ತಿಳಿಸಿದರು. ಮಾ.19 ರಂದು ಕಾರ್ಕಳ ಅಭಿವೃದ್ಧಿ ಬಗ್ಗೆ ರಿಪೋರ್ಟ್ ಕಾರ್ಡ್ ನೀಡಲು ಸಿದ್ದನಾಗಿದ್ದೇನೆ . ಮಾ.3 ರಂದು ನಿಟ್ಟೆಯಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡಲು ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.

ರಾಜ್ಯ ಯುವಮೋರ್ಚ ಸಂದೀಪ್ ಕುಮಾರ್ ಮಾತನಾಡಿದರು , ಗೇರುನಿಗಮ ಅದ್ಯಕ್ಷ ಮಣಿರಾಜ್ ಶೆಟ್ಟಿ , ,ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಬಿಜೆಪಿ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ , ಬಿಜೆಪಿ ಜಿಲ್ಲಾದ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾರ್ಕಳ ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಕ್ಷೇತ್ರಾದ್ಯಕ್ಷ ಮಹಾವೀರ ಹೆಗ್ಡೆ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಸ್ವಾಗತಿಸಿದರು. ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು