News Karnataka Kannada
Monday, April 22 2024
Cricket
ಮನರಂಜನೆ

ಕಾಲಿವುಡ್‌: ಪ್ರಸಿದ್ಧ ಚಲನಚಿತ್ರ ವಿಮರ್ಶಕ ಮತ್ತು ಟ್ರ್ಯಾಕರ್ ಕೌಶಿಕ್ ಹೃದಯಾಘಾತದಿಂದ ನಿಧನ

Kollywood: Noted film critic and tracker Kaushik passes away due to cardiac arrest
Photo Credit : Twitter

ಕಾಲಿವುಡ್‌: ಪ್ರಸಿದ್ಧ ಚಲನಚಿತ್ರ ವಿಮರ್ಶಕ ಮತ್ತು ಟ್ರ್ಯಾಕರ್ ಕೌಶಿಕ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 36ವರ್ಷಕ್ಕೇ ಕೌಶಿಕ್ ಮರಣ ಕಾಲಿವುಡ್‌ನಲ್ಲಿ ತೀವ್ರ ವಿಷಾದವನ್ನುಂಟುಮಾಡಿದೆ. ಕೌಶಿಕ್ ಸಾವಿನ ಬಗ್ಗೆ ಸಹ ವಿಮರ್ಶಕರು ಮತ್ತು ಚಿತ್ರರಂಗದ ಗಣ್ಯರು ತೀವ್ರ ಆಘಾತ ವ್ಯಕ್ತಪಡಿಸಿ, ಸಂತಾಪ ಸೂಚಿಸಿದ್ದಾರೆ.

ಕೌಶಿಕ್ ಅವರ ನಿಧನದ ಸುದ್ದಿಯು ಹೊಸ ಚಲನಚಿತ್ರಗಳ ವಿಮರ್ಶೆಗಾಗಿ ಅವರನ್ನು ಬಹಳ ಕಾಲದಿಂದ ಅನುಸರಿಸುತ್ತಿದ್ದ ಟ್ವಿಟರ್ ಬಳಕೆದಾರರಿಗೆ ಆಘಾತವಾಗಿದೆ.

“ಸೀತಾರಾಮಂ” ಚಿತ್ರಕ್ಕೆ ಸಂಬಂಧಿಸಿದಂತೆ 7 ಗಂಟೆಗಳ ಹಿಂದೆ ಟ್ವೀಟ್ ಅನ್ನು ಸಹ ಅಪ್ಲೋಡ್ ಮಾಡಿದ್ದಾರೆ.  ಕೌಶಿಕ್ ಫಿಲ್ಮ್ ಎಂಟರ್ಟೈನ್ಮೆಂಟ್ ಟ್ರ್ಯಾಕರ್, ಇನ್ಫ್ಲುಯೆನ್ಸರ್, ಯೂಟ್ಯೂಬ್ ವಿಡಿಯೋ ಜಾಕಿ, ಫಿಲ್ಮ್ ವಿಮರ್ಶಕ, ಕ್ರಿಕೆಟ್ ಮತ್ತು ಟೆನಿಸ್ ಬಫ್ ಎಂದು ಗುರುತಿಸಲ್ಪಟ್ಟಿದ್ದಾರೆ.

ಮೈಕ್ರೋ ಬ್ಲಾಗಿಂಗ್ ಸೋಶಿಯಲ್ ಮೀಡಿಯಾ ಸೈಟ್ 4 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಕೌಶಿಕ್ ನಿಧನಕ್ಕೆ ನಟ ದುಲ್ಕರ್‌, ವಿಜಯದೇವರಕೊಂಡ, ಸಹ ಚಿತ್ರ ಟ್ರ್ಯಾಕರ್‌ಗಳು, ಥಿಯೇಟರ್ ಮಾಲೀಕರು, ಗಣ್ಯರು ಮತ್ತು ಚಲನಚಿತ್ರ ವಿಮರ್ಶಕರು ಸಂತಾಪ ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು