News Karnataka Kannada
Wednesday, May 15 2024
ವಿದೇಶ

ಅಫ್ಘಾನಿಸ್ತಾನ: ತಾಲೀಬಾನ್‌ ಸರ್ಕಾರಕ್ಕೆ 1 ವರ್ಷ, ಭರ್ಜರಿ ಸಂಭ್ರಮಾಚರಣೆ

Afghanistan: Taliban government celebrates 1 year in office
Photo Credit : Freepik

ಅಫ್ಘಾನಿಸ್ತಾನ: ತಾಲಿಬಾನಿಗರು ಅಫ್ಘಾನಿಸ್ತಾನವನ್ನು ಮರು ವಶಪಡಿಸಿಕೊಂಡು 1 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ನೂರಾರು ತಾಲಿಬಾನ್ ಹೋರಾಟಗಾರರು ಕಾಬೂಲ್‌ನ ಬೀದಿಗಳಲ್ಲಿ ಸೇರಿ ಸರ್ಕಾರದ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿದರು.

ಈ ವೇಳೆ ತೆರೆದ ಪಿಕ್-ಅಪ್ ಟ್ರಕ್‌ಗಳಲ್ಲಿ ಸವಾರಿ ಮಾಡಿ, ಸ್ವಯಂಚಾಲಿತ ಬಂದೂಕುಗಳನ್ನು ಹಿಡಿದುಕೊಂಡು ತಮ್ಮ ಗುಂಪಿನ ಬಿಳಿ ಮತ್ತು ಕಪ್ಪು ಧ್ವಜಗಳನ್ನು ಬೀಸಿ ಸಂಭ್ರಮಿಸಿದರು.

ಅಮೆರಿಕಾದ ವಿರುದ್ಧ ತಾಲಿಬಾನ್ ನಾಯಕರು ತೋರಿದ ಶೌರ್ಯ- ಪರಾಕ್ರಮಗಳ ಸ್ಮರಣಾರ್ಥವಾಗಿ ಭಾರತೀಯ ರಾಯಭಾರ ಕಚೇರಿಗೆ ಸಮೀಪವಿರುವ ಹೈ-ಸೆಕ್ಯುರಿಟಿ ಗ್ರೀನ್ ಝೋನ್‌ನಲ್ಲಿರುವ ಸಭಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇದರಲ್ಲಿ ಹಲವಾರು ನಾಗರೀಕರು ಭಾಗವಹಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಮಹಿಳೆಯರಿಗೆ ಪ್ರವೇಶವಿರಲಿಲ್ಲ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು