News Karnataka Kannada
Thursday, May 02 2024
ಮನರಂಜನೆ

ʼಸಲಾರ್ʼ​ ರಿಲೀಸ್​ ಡೇಟ್​ ತಿಳಿಸಿದ ಹೊಂಬಾಳೆ ಫಿಲ್ಮ್ಸ್​

'Salaar' crosses Rs 400 crore mark at world box office
Photo Credit : Twitter

ಮಹಾರಾಷ್ಟ್ರ: ಪ್ರಭಾಸ್​ ಅಭಿನಯದ ‘ಸಲಾರ್​’ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಹಲವು ಅಂತೆ-ಕಂತೆಗಳು ಹರಿದಾಡುತ್ತಿದ್ದವು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಸೆಪ್ಟೆಂಬರ್​ 28ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಲಾರ್​ ರಿಲೀಸ್​ ದಿನಾಂಕ ಮುಂದಕ್ಕೆ ಹೋಗಿತ್ತು. ಹೊಸ ಡೇಟ್​ ಬಗ್ಗೆ ತಿಳಿಯಲು ಕಾದಿದ್ದ ಫ್ಯಾನ್ಸ್​ಗೆ ಈಗ ಗುಡ್​ ನ್ಯೂಸ್​ ಸಿಕ್ಕಿದೆ. 2023ರಲ್ಲೇ ಈ ಚಿತ್ರ ತೆರೆಕಾಣಲಿದೆ ಎಂಬುದು ಖಚಿತವಾಗಿದೆ.

ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್​’ ಕಡೆಯಿಂದ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ಡಿಸೆಂಬರ್​ 22ರಂದು ‘ಸಲಾರ್​’ ಬಿಡುಗಡೆ ಆಗಲಿದೆ. ‘ಕಮಿಂಗ್​ ಬ್ಲಡಿ ಸೂನ್​’ ಎಂಬ ಖಡಕ್​ ಕ್ಯಾಪ್ಷನ್​ ಮತ್ತು ಪೋಸ್ಟರ್​ ಮೂಲಕ ರಿಲೀಸ್​ ಡೇಟ್​ ತಿಳಿಸಲಾಗಿದೆ. ಪ್ರಭಾಸ್​ ಮತ್ತು ಪ್ರಶಾಂತ್​ ನೀಲ್ ಅವರ ಕಾಂಬಿನೇಷನ್​ ಎಂಬ ಕಾರಣಕ್ಕೆ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಪ್ರಭಾಸ್​, ಶ್ರುತಿ ಹಾಸನ್​, ಜಗಪತಿ ಬಾಬು, ಪೃಥ್ವಿರಾಜ್​ ಸುಕುಮಾರನ್​, ಟಿನು ದೇಸಾಯಿ, ಈಶ್ವರಿ ರಾವ್​ ಮುಂತಾದವರು ‘ಸಲಾರ್​’ ಸಿನಿಮಾದಲ್ಲಿ ನಟಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು