News Karnataka Kannada
Monday, April 29 2024
ಮನರಂಜನೆ

‘ಫೈಟರ್’ ಚಿತ್ರದ 2 ದೃಶ್ಯಗಳಿಗೆ ಕತ್ತರಿ ಹಾಕಲು ಸೆನ್ಸಾರ್ ಸೂಚನೆ

ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ನಟನೆಯ ಫೈಟರ್ ಚಿತ್ರ   ಫಿಲ್ಮ್‌ ಬಿಸ್ನೆಸ್‌ ತಜ್ಞ ಮತ್ತು ನಿರ್ಮಾಪಕರಾದ ಗಿರೀಶ್‌ ಜೋಹಾರ್‌ ಪ್ರಕಾರ ಸದ್ಯ ಯುಎಇ ಹೊರತುಪಡಿಸಿ ಇತರೆ ಗಲ್ಫ್‌ ದೇಶಗಳಲ್ಲಿ ಬಿಡುಗಡೆಗೆ ಸಿನಿಮಾಕ್ಕೆ ಅನುಮತಿ ದೊರಕಿಲ್ಲ.  ಈ ಚಿತ್ರದ ಎರಡು ದೃಶ್ಯಗಳಿಗೆ ಕತ್ತರಿ ಹಾಾಕುವಂತೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ.
Photo Credit : News Kannada

ಮುಂಬೈ: ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ನಟನೆಯ ಫೈಟರ್ ಚಿತ್ರ   ಫಿಲ್ಮ್‌ ಬಿಸ್ನೆಸ್‌ ತಜ್ಞ ಮತ್ತು ನಿರ್ಮಾಪಕರಾದ ಗಿರೀಶ್‌ ಜೋಹಾರ್‌ ಪ್ರಕಾರ ಸದ್ಯ ಯುಎಇ ಹೊರತುಪಡಿಸಿ ಇತರೆ ಗಲ್ಫ್‌ ದೇಶಗಳಲ್ಲಿ ಬಿಡುಗಡೆಗೆ ಸಿನಿಮಾಕ್ಕೆ ಅನುಮತಿ ದೊರಕಿಲ್ಲ.  ಈ ಚಿತ್ರದ ಎರಡು ದೃಶ್ಯಗಳಿಗೆ ಕತ್ತರಿ ಹಾಾಕುವಂತೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ.

ಹೋದಬಾರಿ ಶಾರೂಖ್ ಜೊತೆ ನಟಿಸಿದ್ದ ಸಿನಿಮಾದಲ್ಲಿ ನಟಿ ದೀಪಿಕಾ ಕೇಸರಿ ಬಿಕಿನಿ ಹಾಕಿ, ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಹಾಗಾಗಿ ಪಠಾಣ್ ಸಿನಿಮಾದಲ್ಲಿ ದೀಪಿಕಾಳ ಬಿಕಿನಿ ಲುಕ್ ಕತ್ತರಿಸಲಾಾಗಿತ್ತು. ಇದರಲ್ಲೂ ದೀಪಿಕಾ ಬಿಕಿನಿ ದೃಶ್ಯವನ್ನು ಕಟ್ ಮಾಡುವಂತೆ ಸೆನ್ಸಾರ್ ಸೂಚಿಸಿದೆ.

ಫೈಟರ್ ಸಿನಿಮಾದಲ್ಲಿ ನಟಿಸಿರುವ ಕಲಾವಿದರ ಸಂಭಾವನೆಗೆ ಸದ್ದು ಮಾಡುತ್ತಿದೆ. ಇದರಲ್ಲಿ ಹೃತಿಕ್ ಮತ್ತು ದೀಪಿಕಾ ಕೋಟಿ ಕೋಟಿ ಸಂಭಾಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇವರ ಸಂಭಾವನೆಯಿಂದಲೇ ಚಿತ್ರದ ಬಜೆಟ್ ಮಿತಿ ಮೀರಿದೆ ಎಂದು, ಫೈಟರ್ ಚಿತ್ರದ ನಿರ್ಮಾಪಕ ಕಮಾಲ್ ಖಾನ್ ಟ್ವೀಟ್ ಮಾಡಿದ್ದರು.

ನಿರ್ದೇಶಕ ಸಿದ್ಧಾರ್ಥ್ ಆನಂದ್‌ 40 ಕೋಟಿ ಸಂಭಾವನೆ ಪಡೆದಿದ್ದಾರೆ. ಹೃತಿಕ್ 85 ಕೋಟಿಯಾದರೆ, ದೀಪಿಕಾ 20 ಕೋಟಿ ಸಂಭಾವನೆ ಪಡೆದಿದ್ದಾರೆ. ಉಳಿದ ಕಲಾವಿದರಿಗೆ 15 ಕೋಟಿ ಕೊಡಲಾಗಿದೆ. ಚಿತ್ರದ ಬಜೆಟ್ 350 ಕೋಟಿಯಾದರೆ, ಕಲಾವಿದರಿಗೆ ಕೊಡುವ ಸಂಭಾವನೆ 160 ಕೋಟಿ ಮೀರಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು