Bengaluru 23°C
Ad

ಆಮಿರ್​ ಖಾನ್​ ಪುತ್ರನ ‘ಮಹಾರಾಜ್​’ ಸಿನಿಮಾ ಬಿಡುಗಡೆಗೆ ಕೋರ್ಟ್​ ಅನುಮತಿ

ಖ್ಯಾತ ಬಾಲಿವುಡ್‌ ನಟ ಅಮಿರ್‌ ಖಾನ್‌ ಅವರ ಪುತ್ರನ ಮೊದಲ ಸಿನಿಮಾ ‘ಮಹಾರಾಜ್​’ ಬಿಡುಗಡೆಗೆ ಕೋರ್ಟ್​ ಅನುಮತಿ ನೀಡಿದೆ. ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ಅನೇಕರು ತಕರಾರು ತೆಗೆದಿದ್ದರು.

ಖ್ಯಾತ ಬಾಲಿವುಡ್‌ ನಟ ಅಮಿರ್‌ ಖಾನ್‌ ಅವರ ಪುತ್ರನ ಮೊದಲ ಸಿನಿಮಾ ‘ಮಹಾರಾಜ್​’ ಬಿಡುಗಡೆಗೆ ಕೋರ್ಟ್​ ಅನುಮತಿ ನೀಡಿದೆ. ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ಅನೇಕರು ತಕರಾರು ತೆಗೆದಿದ್ದರು. ಅಲ್ಲದೇ, ನ್ಯಾಯಾಲಯ ಕೂಡ ಈ ಸಿನಿಮಾದ ಬಿಡುಗಡೆಗೆ ತಡೆಯಾಜ್ಞೆ ನೀಡಿತ್ತು. ಹಾಗಾಗಿ ರಿಲೀಸ್​ ಮುಂದೂಡಲಾಗಿತ್ತು. ಆದರೆ ಈಗ ‘ಮಹಾರಾಜ್​’ಸಿನಿಮಾವನ್ನು ರಿಲೀಸ್​ ಮಾಡಬಹುದು ಎಂದು ಗುಜರಾತ್​ ಹೈಕೋರ್ಟ್​ ಆದೇಶ ನೀಡಿದೆ. ತಡೆಯಾಜ್ಞೆ ತೆರವುಗೊಳ್ಳುತ್ತಿದ್ದಂತೆಯೇ ‘ನೆಟ್​ಫ್ಲಿಕ್ಸ್​’ ಒಟಿಟಿ ಮೂಲಕ ಈ ಸಿನಿಮಾ ಬಿಡುಗಡೆ ಆಗಿದೆ.

ಸೌರಭ್​ ಶಾ ಬರೆದ ‘ಮಹಾರಾಜ್​’ ಪುಸ್ತಕವನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. 2013ರಿಂದಲೂ ಈ ಪುಸ್ತಕ ಲಭ್ಯವಿದೆ. ಈ ಪುಸ್ತಕದಿಂದ ಯಾವುದೇ ಗಲಭೆ ಆಗಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ. ಹಾಗಿದ್ದಮೇಲೆ ‘ಮಹಾರಾಜ್​’ ಸಿನಿಮಾ ಕೂಡ ಯಾವುದೇ ಗಲಭೆಗೆ ಕಾರಣ ಆಗುವುದಿಲ್ಲ ಎಂದು ನಿರ್ಮಾಪಕರ ಪರ ಲಾಯರ್​ ವಾದಿಸಿದರು. ವಾದ ಆಲಿಸಿದ ಬಳಿಕ ಕೋರ್ಟ್​ ಈ ಆದೇಶ ನೀಡಿದೆ.

Ad
Ad
Nk Channel Final 21 09 2023
Ad