News Karnataka Kannada
Monday, April 29 2024
ಬಾಲಿವುಡ್

ನಟ ರವಿ ಕಿಶನ್ ಪುತ್ರಿ ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆಗೆ ಸೇರ್ಪಡೆ

Ravi Kishan's daughter
Photo Credit : Twitter

ದಕ್ಷಿಣ ಭಾರತದ ಖ್ಯಾತ ನಟ, ‘ಹೆಬ್ಬುಲಿ’ ಚಿತ್ರದ ವಿಲನ್ ಖ್ಯಾತಿಯ ನಟ ರವಿ ಕಿಶನ್ ಪುತ್ರಿ ಭಾರತೀಯ ಸೇನೆ ಸೇರಿದ್ದಾರೆ. ನಟ, ಸಂಸದ ರವಿ ಕಿಶನ್ ಮಗಳು ಇಶಿತಾ ಶುಕ್ಲಾ(21) ಭಾರತೀಯ ಸೇನೆ ಸೇರಿದ್ದಾರೆ.

ಈ ಮೂಲಕ ಎಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಈ ವಿಚಾರವನ್ನು ಸ್ವತಃ ರವಿ ಕಿಶನ್ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ‘ದೇಶ ಸೇವೆ ಮಾಡುವ ಅವಕಾಶ ಇಶಿತಾಗೆ ಸಿಕ್ಕಿದೆ. ತಮ್ಮ ಪುತ್ರಿಯ ಸಾಧನೆ ಬಗ್ಗೆ ತಮಗೆ ಅತೀವ ಹೆಮ್ಮೆ ಇದೆ. ಆಕೆಯ ಭವಿಷ್ಯ ಉಜ್ವಲವಾಗಿರಲಿ ಎಂದು ರವಿ ಕಿಶನ್ ಆಶಿಸಿದ್ದಾರೆ.

ರಿವಾ ಕಿಶನ್ ಶುಕ್ಲಾ ಪುತ್ರಿ 2020ರಲ್ಲಿ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ‘ಸಬ್ ಕುಶಲ್ ಮಂಗಲ್’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಎಲ್ಲರೂ ಇಶಿತಾ ಹಾಗೂ ರವಿ ಕಿಶನ್​ಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಈ ವಿಚಾರದಲ್ಲಿ ಕುಟುಂಬ ತೆಗೆದುಕೊಂಡ ನಿರ್ಧಾರ ಶ್ಲಾಘನೀಯ ಎಂದು ಅನೇಕರು ಹೇಳಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು