News Karnataka Kannada
Sunday, April 28 2024
ಬಾಲಿವುಡ್

ಸೆಪ್ಟೆಂಬರ್‌ನಲ್ಲಿ ದೀಪಿಕಾ ಪಡುಕೋಣೆ ಕುಟುಂಬಕ್ಕೆ ಹೊಸ ಅತಿಥಿ ಆಗಮನ

ಬಾಲಿವುಡ್ ಕಪರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಮಗುವಿನ ಆಗಮನವಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅನೌನ್ಸ್ ಮಾಡಿದ್ದಾರೆ.
Photo Credit : News Kannada

ಮುಂಬೈ:  ಬಾಲಿವುಡ್ ಕಪರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಮಗುವಿನ ಆಗಮನವಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅನೌನ್ಸ್ ಮಾಡಿದ್ದಾರೆ. ದೀಪಿಕಾ ಸದ್ಯಕ್ಕೆ ಎರಡನೇ ಟ್ರೈಮಿಸ್ಟರ್‌ನಲ್ಲಿದ್ದಾರೆ ಎಂದು ಕೆಲವು ಮೂಲಗಳಿಂದ ಮಾಹಿತಿ ಕೇಳಿ ಬಂದಿದೆ. 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ಸೆಪ್ಟೆಂಬರ್ 2024ರಲ್ಲಿ ಪೋಷಕರಾಗಲಿದ್ದಾರೆ.

ಪುಟ್ಟ ಮಕ್ಕಳ ಬಟ್ಟೆ ಚಪ್ಪಲಿ ಮತ್ತು ಆಟದ ವಸ್ತುಗಳು ಸೇರಿಕೊಂಡಿರುವ ಫೋಟೋದಲ್ಲಿ ‘ಸೆಪ್ಟೆಂಬರ್ 2024. ದೀಪಿಕಾ ಮತ್ತು ರಣವೀರ್’ ಎಂದು ಬರೆಯಲಾಗಿದೆ. ನಮಸ್ತೆ ಮಾಡುತ್ತಿರುವುದು ಹಾಗೂ ದೃಷ್ಠಿ ತೆಗೆಯುತ್ತಿರುವ ಎಮೋಷಿಯನ್ನು ಕ್ಯಾಪ್ಶನ್‌ನಲ್ಲಿ ಹಾಕಿದ್ದಾರೆ.

ಹಲವು ದಿನಗಳಿಂದ ದೀಪಿಕಾ ಪಡುಕೋಣೆ ಪ್ರೆಗ್ನೆಂಟ್ ಅನ್ನೋ ವಿಚಾರ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. 77ನೇ ಬ್ರಿಟಿಷ್‌ ಅಕಾಡಮಿ ಫಿಲ್ಮ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ಚಿಣಿಮಿಣಿ ಸೀರೆಯಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಾಗಲೇ ಪ್ರೆಗ್ನೆಂಟ್ ಅನ್ನೋ ವಿಚಾರ ಹರಿದಾಡಲು ಶುರುವಾಗಿತ್ತು. ದೀಪಿಕಾ ಧರಿಸಿದ ಸೀರೆ ಮತ್ತು ಆಭರಣವನ್ನು ಸಬ್ಯಾಸಾಚಿ ಮುಖರ್ಚಿ ಡಿಸೈನ್ ಮಾಡಿದ್ದರು.

https://www.instagram.com/deepikapadukone/

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು