ನಟ ಸಲ್ಮಾನ್ ಖಾನ್ ಚಿತ್ರಗಳಲ್ಲಿ ಆಕ್ಷನ್ ಗೆ ಯಾವುದೇ ಕೊರತೆ ಇರೋದಿಲ್ಲ ಅನ್ನೋದಕ್ಕೆ ಈಗ ಮತ್ತೊಂದು ಸಿನಿಮಾ ಸಾಕ್ಷಿಯಾಗಿದೆ.
ಸಲ್ಲು ಅಭಿನಯದ ಅಂತಿಮ್- ದಿ ಫೈನಲ್ ಟ್ರುತ್ ಚಿತ್ರದ ಮೊದಲ ಟ್ರೈಲರ್ ಬಿಡುಗಡೆಯಾಗಿದ್ದು, ಭರ್ಜರಿ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ಸಲ್ಲು ಖಡಕ್ ಸಿಖ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದು, ಆಯುಶ್ ಶರ್ಮಾ ಗ್ಯಾಂಗ್ ಸ್ಟರ್ ಆಗಿ ನಟಿಸಿದ್ದಾರೆ.
ಇದರ ಟ್ರೈಲರ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದು, ಚಿತ್ರವನ್ನು ತೆರೆ ಮೇಲೆ ನೋಡಲು ಕಾತುರದಿಂದಿದ್ದಾರೆ. ಈ ಚಿತ್ರ ನ.26ರಂದು ಬಿಗ್ ಸ್ಕ್ರೀನ್ ಮೇಲೆ ಬರಲಿದ್ದು, ಪ್ರೇಕ್ಷಕರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.