ಮುಂಬೈ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಕುಸ್ತಿಪಟು ಮೀರಾಬಾಯಿ ಚಾನು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿದ್ದಾರೆ.
ಮೀರಾಬಾಯಿ ಭೇಟಿಯಾದ ವಿಚಾರವನ್ನು ಸಲ್ಮಾನ್ ಖಾನ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಮೀರಾಬಾಯಿ ಜತೆ ತೆಗೆಸಿಕೊಂಡ ಫೋಟೊವನ್ನು ಕೂಡ ಪೋಸ್ಟ್ ಮಾಡಿದ್ದಾರೆ.
ಈ ಟ್ವೀಟ್ ಅನ್ನು ಮೀರಾಬಾಯಿ ರಿಟ್ವೀಟ್ ಮಾಡಿದ್ದು, ನಾನು ನಿಮ್ಮ ದೊಡ್ಡ ಅಭಿಮಾನಿಯಾಗಿದ್ದೇನೆ. ನಿಮ್ಮನ್ನು ಭೇಟಿಯಾಗಬೇಕೆಂಬ ಕನಸು ಕೊನೆಗೂ ಈಡೇರಿದೆ ಎಂದಿದ್ದಾರೆ.