News Karnataka Kannada
Sunday, May 05 2024
ಬಾಲಿವುಡ್

ಮದುವೆಗೂ ಮುನ್ನ ನಾನು ಬುರ್ಖಾ ಧರಿಸುತ್ತಿದ್ದೆ; ನಟಿ ದೀಪಿಕಾ ಪಡುಕೋಣೆ

Deepika 31082021
Photo Credit :

ಮುಂಬೈ: 2018ರಲ್ಲಿ ಬಾಲಿವುಡ್‌ ತಾರೆಯರಾದ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ​ಕಳೆದ ವಾರ ತಮ್ಮ ಮೂರನೆಯ ವಿವಾಹ ವಾರ್ಷಿಕೋತ್ಸವವವನ್ನು ಭರ್ಜರಿಯಾಗಿ ಈ ಜೋಡಿ ಆಚರಿಸಿಕೊಂಡಿದೆ.

ಈ ಸಂದರ್ಭದಲ್ಲಿ ಇಲ್ಲಿಯವರೆಗೆ ಹೇಳದಿದ್ದ ಗುಟ್ಟೊಂದನ್ನು ದೀಪಿಕಾ ಹೇಳಿದ್ದಾರೆ. ಅದೇನೆಂದರೆ ತಾವು ಮದುವೆಗೂ ಮುನ್ನ ಬುರ್ಖಾ ಧರಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ‘ನನ್ನ ಮತ್ತು ರಣವೀರ್‌ ಮದುವೆ ಫಿಕ್ಸ್ ಆದಾಗಿನಿಂದಲೂ ನಾನು ಬುರ್ಖಾ ಧರಿಸುತ್ತಿದ್ದೆ. ನಿಮಗೆಲ್ಲಾ ಇದನ್ನು ಕೇಳಿ ಅಚ್ಚರಿಯಾಗಬಹುದು. ಆದರೆ ಅದು ನನಗೆ ಅನಿವಾರ್ಯವಾಗಿತ್ತು’ ಎಂದಿದ್ದಾರೆ ನಟಿ.

ಅಷ್ಟಕ್ಕೂ ಬುರ್ಖಾ ಧರಿಸಲು ಕಾರಣ ಏನೆಂದರೆ, ಇವರಿಬ್ಬರು ಮದುವೆ ಆಗುತ್ತಾರೆ ಎಂಬ ಸುದ್ದಿ ಬಹಳ ಮುಂಚೆಯೇ ಹರಡಿಬಿಟ್ಟಿತ್ತು. ಆದ್ದರಿಂದ ಈ ಜೋಡಿಯ ಮೇಲೆ ಮಾಧ್ಯಮಗಳ ಕಣ್ಣು ಸದಾ ನೆಟ್ಟಿರುತ್ತಿದ್ದವು. ಎಲ್ಲಿಗೆ ಹೋಗ್ತಾರೆ, ಏನು ಮಾಡ್ತಾರೆ ಎನ್ನುವ ಬಗ್ಗೆ ವರದಿ ಮಾಡಲು ಪತ್ರಕರ್ತರು ಕಾಯುತ್ತಿದ್ದರು. ಇದಕ್ಕಾಗಿಯೇ ಅನಿವಾರ್ಯವಾಗಿ ಹಲವು ತಿಂಗಳು ತಾವು ಬುರ್ಖಾ ಧರಿಸಿಕೊಂಡು ಓಡಾಡಬೇಕಾಯಿತು ಎಂದಿದ್ದಾರೆ ದೀಪಿಕಾ.

‘ಮದುವೆ ದಿನದ ಡ್ರೆಸ್​ ಹೇಗಿರಬೇಕು ಎಂಬುದಕ್ಕೆ ನಾನು ಮತ್ತು ರಣವೀರ್‌ ಬಹಳ ತಲೆ ಕೆಡಿಸಿಕೊಂಡಿದ್ದೆವು. ಅದಕ್ಕಾಗಿ ಹಲವಾರು ಅಂಗಡಿಗಳನ್ನು ಸುತ್ತಬೇಕಿತ್ತು. ಆದರೆ ಮದುವೆಯ ಬಗ್ಗೆ ಬಹಳ ಮುಂಚೆಯೇ ಬಹಿರಂಗವಾದ ಹಿನ್ನೆಲೆಯಲ್ಲಿ ಮಾಧ್ಯಮಗಳು ನಮ್ಮನ್ನು ಬಿಡುತ್ತಿರಲಿಲ್ಲ. ಈ ಸಂದರ್ಭದಲ್ಲಿ ನನ್ನ ವಸ್ತ್ರವಿನ್ಯಾಸಕ ಸಬ್ಯಸಾಚಿ ನನಗೊಂದು ಸಲಹೆ ಕೊಟ್ಟರು. ನೀವು ಬುರ್ಖಾ ಧರಿಸಿ ಹೋಗುವುದು ಅನಿವಾರ್ಯ. ಇಲ್ಲದಿದ್ದರೆ ನಿಮಗೆ ಕಷ್ಟವಾಗಬಹುದು ಎಂದರು. ಅದರ ಡಿಸೈನ್‌ ಕೂಡ ಅವರೇ ಮಾಡಿಕೊಟ್ಟರು. ಅವರ ಸಲಹೆಯಂತೆ ನಾನು ಬುರ್ಖಾ ಧರಿಸಿದೆ’ ಎಂದಿದ್ದಾರೆ ನಟಿ.

ಸದ್ಯ ರಣವೀರ್ ಸಿಂಗ್​ ಹಾಗೂ ದೀಪಿಕಾ ಜತೆಯಾಗಿ ನಟಿಸಿರುವ ’83’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಕರೊನಾ ಕಾರಣದಿಂದ ಮುಂದೂಡತ್ತಲೇ ಇದೆ. 1983ರಲ್ಲಿ ಭಾರತ ಕ್ರಿಕೆಟ್​ ತಂಡ ವಿಶ್ವಕಪ್​ ಗೆದ್ದ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ನಟಿಸಿದ್ದಾರೆ. ಡಿ.24ರಂದು ಈ ಚಿತ್ರ ತೆರೆಕಾಣಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು