News Karnataka Kannada
Monday, April 29 2024
ಬಾಲಿವುಡ್

‘ಫಿಜಾ’ ಸಿನಿಮಾ ನಿರ್ಮಾಪಕ ಪ್ರದೀಪ್ ಗುಹಾ ನಿಧನ

Pradeep Guha 22082021
Photo Credit :

ಬಾಲಿವುಡ್‌ ನಿರ್ಮಾಪಕ ಹಾಗೂ ಹಲವು ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರಾಗಿ ಕೆಲಸ ಮಾಡಿದ್ದ ಪ್ರದೀಪ್ ಗುಹಾ ಶನಿವಾರ ತಡರಾತ್ರಿ ನಿಧನರಾಗಿದ್ದಾರೆ.

ಪ್ರದೀಪ್ ಗುಹಾ ಲಿವರ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹಲವು ದಿನಗಳಿಂದ ಅವರು ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಪ್ರದೀಪ್‌ ಗುಹಾ ಮೃತಪಟ್ಟಿದ್ದಾರೆ.

ಹೃತಿಕ್ ರೋಷನ್ ಮತ್ತು ಕರಿಷ್ಮಾ ಕಪೂರ್ ಅಭಿನಯದ ‘ಫಿಜಾ’ ಸಿನಿಮಾವನ್ನು ಪ್ರದೀಪ್‌ ಗುಹಾ ನಿರ್ಮಾಣ ಮಾಡಿದ್ದರು. ಬಾಂಬೆ ಟೈಮ್ಸ್‌ ಪತ್ರಿಕೆ ಸಂಪಾದಕರಾಗಿ, ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ನ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದರು.

ಪ್ರದೀಪ್‌ ಗುಹಾ ನಿಧನಕ್ಕೆ ಬಾಲಿವುಡ್‌ ಸೇರಿದಂತೆ ಮಾಧ್ಯಮ ಸಂಸ್ಥೆಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು