ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೆಸರಿಗೆ ಪತಿ ರಾಜ್ ಕುಂದ್ರಾ 38.5 ಕೋಟಿ ರೂ. ಮೌಲ್ಯದ 5 ಫ್ಲ್ಯಾಟ್ ಗಳನ್ನು ವರ್ಗಾಯಿಸಿದ್ದಾರೆ.
ಕಳೆದ 6 ತಿಂಗಳಿಂದ ಸಂಕಷ್ಟ ಎದುರಿಸಿದ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ದಂಪತಿ ಇದೀಗ ನಿಧಾನವಾಗಿ ಹೊರಗೆ ಬರುತ್ತಿದ್ದಾರೆ. ಇದೇ ವೇಳೆ ಕುಂದ್ರಾ ತನ್ನ ಹೆಸರಿನಲ್ಲಿದ್ದ 38.5 ಕೋಟಿ ರೂ. ಮೌಲ್ಯದ 5 ಫ್ಲ್ಯಾಟ್ ಗಳನ್ನು ವರ್ಗಾಯಿಸಿದ್ದಾರೆ.
ಮುಂಬೈನಲ್ಲಿರುವ ಫ್ಲ್ಯಾಟ್ ಗಳನ್ನು ಪತ್ನಿಗೆ ಹಸ್ತಾಂತರಿಸುವಾಗ 1.92 ಕೋಟಿ ರೂ. ಮೌಲ್ಯದ ಸ್ಟ್ಯಾಂಪ್ ಡ್ಯೂಟಿ ಪಾವತಿಸಲಾಗಿದೆ ಎಂದು ಹೇಳಲಾಗಿದೆ.