News Karnataka Kannada
Sunday, May 12 2024
ಮನರಂಜನೆ

ಬಿಗ್​ಬಾಸ್ ಗೆದ್ದು ಹೊಸ ದಾಖಲೆ ಬರೆದ ಅರ್ಚನಾ ರವಿಚಂದ್ರನ್

ಕನ್ನಡ ಬಿಗ್​ಬಾಸ್ ಸೀಸನ್ 10 ಮುಗಿಯಲು ಕೆಲವೇ ದಿನಗಳು ಬಾಕಿ ಇದೆ. ತೆಲುಗು ಬಿಗ್​ಬಾಸ್​ ತಿಂಗಳ ಹಿಂದೆಯೇ ಮುಗಿದು ಸಾಮಾನ್ಯ ರೈತನ ಮಗ ಪ್ರಶಾಂತ್ ವಿನ್ನರ್ ಆಗಿದ್ದರು. ಕಳೆದ ದಿನವಷ್ಟೇ ತಮಿಳು ಬಿಗ್​ಬಾಸ್ ಮುಗಿದಿದ್ದು ಶೋನ ಮಧ್ಯದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದಿದ್ದ ಅರ್ಚನಾ ರವಿಚಂದ್ರನ್ ವಿಜೇತರಾಗಿ ಗಮನ ಸೆಳೆದಿದ್ದಾರೆ.
Photo Credit : Twitter

ಚೆನ್ನೈ: ಕನ್ನಡ ಬಿಗ್​ಬಾಸ್ ಸೀಸನ್ 10 ಮುಗಿಯಲು ಕೆಲವೇ ದಿನಗಳು ಬಾಕಿ ಇದೆ. ತೆಲುಗು ಬಿಗ್​ಬಾಸ್​ ತಿಂಗಳ ಹಿಂದೆಯೇ ಮುಗಿದು ಸಾಮಾನ್ಯ ರೈತನ ಮಗ ಪ್ರಶಾಂತ್ ವಿನ್ನರ್ ಆಗಿದ್ದರು. ಕಳೆದ ದಿನವಷ್ಟೇ ತಮಿಳು ಬಿಗ್​ಬಾಸ್ ಮುಗಿದಿದ್ದು ಶೋನ ಮಧ್ಯದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದಿದ್ದ ಅರ್ಚನಾ ರವಿಚಂದ್ರನ್ ವಿಜೇತರಾಗಿ ಗಮನ ಸೆಳೆದಿದ್ದಾರೆ.

ಹೌದು. . ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಬಿಗ್​ಬಾಸ್ ವಿಜೇತರಾದ ಮೊದಲ ಮಹಿಳಾ ಸ್ಪರ್ಧಿ ಎನಿಸಿಕೊಂಡಿದ್ದಾರೆ ಅರ್ಚನಾ. ವಿಶೇಷವೆಂದರೆ ಬಿಗ್​ಬಾಸ್ ತಮಿಳಿನ ಫೈನಲ್​ಗೆ ಬಂದ ಇಬ್ಬರೂ ಸಹ ಮಹಿಳೆಯರೇ ಆಗಿದ್ದರು. ಅರ್ಚನಾ ರವಿಚಂದ್ರನ್ ವಿಜೇತರಾದರೆ ಮೊದಲ ರನ್ನರ್ ಅಪ್ ಆಗಿದ್ದು ಮಣಿಚಂದ್ರನ್.

ತಮಿಳು ಬಿಗ್​ಬಾಸ್ ಫಿನಾಲೆ ದಿನ ಮಣಿಚಂದ್ರನ್, ಪ್ರಿಯಾ ಕೃಷ್ಣನ್, ದಿನೇಶ್, ವಿಷ್ಣು ಹಾಗೂ ಅರ್ಚನಾ ರವಿಚಂದ್ರನ್ ಅವರುಗಳು ಟಾಪ್ ಐದು ಸ್ಪರ್ಧಿಗಳಾಗಿ ಉಳಿದಿದ್ದರು. ಅವರಲ್ಲಿ ಮಾಯಾ ಕೃಷ್ಣನ್ ಹಾಗೂ ಅರ್ಚನಾ ರವಿಚಂದ್ರನ್ ಅವರುಗಳು ಕೊನೆಯ ಇಬ್ಬರು ಫೈನಲಿಸ್ಟ್​ಗಳಾದರು. ಆ ಇಬ್ಬರಲ್ಲಿ ಅರ್ಚನಾ ರವಿಚಂದ್ರನ್ ಗೆದ್ದು ಬೀಗಿದರು.

ಟ್ರೋಫಿ ಗೆದ್ದ ಬಳಿಕ ಮಾತನಾಡಿರುವ ಅರ್ಚನಾ, ‘ನನಗೆ ಇದು ನಂಬಲು ಸಾಧ್ಯವಾಗುತ್ತಿಲ್ಲ. ಒಂದೆರಡು ವಾರವಷ್ಟೆ ಮನೆಯಲ್ಲಿ ಉಳಿಯಬಹುದೇನೋ ಎಂದು ಕೊಂಡೇ ನಾನು ಬಿಗ್​ಬಾಸ್ ಮನೆಗೆ ಬಂದಿದ್ದೆ. ಆದರೆ ಇದನ್ನು ನಾನು ಊಹಿಸಿರಲಿಲ್ಲ. ನನ್ನ ಶಾಲಾ ದಿನಗಳಿಂದಲೂ ನನಗೆ ಆತ್ಮೀಯ ಗೆಳೆಯರು ಯಾರೂ ಇಲ್ಲ. ಇಷ್ಟೋಂದು ಜನರ ಜೊತೆ ಒಡನಾಡಿದ್ದೇ ಇಲ್ಲ. ಈಗ ಹಿಂತಿರುಗಿ ನೋಡಿದಾಗ ಎಷ್ಟೋಂದು ಜನರು ನನ್ನೊಟ್ಟಿಗೆ ಇದ್ದಾರೆ ಅನಿಸುತ್ತದೆ. ಕಮಲ್ ಸರ್, ನಿಮ್ಮನ್ನು ನಾನು ಮೆಂಟರ್ ಅಂದುಕೊಂಡಿದ್ದೇನೆ. ನನ್ನ ಗೆಲುವಿನ ನಿಮ್ಮ ಪಾತ್ರವೂ ಇದೆ. ನಿಮಗೆ ವಿಶೇಷ ಧನ್ಯವಾದ’ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು