News Karnataka Kannada
Friday, May 03 2024
ಮನರಂಜನೆ

ಪ್ರಾಜೆಕ್ಟ್ ಕೆ ಚಿತ್ರದ ಶೂಟಿಂಗ್ ವೇಳೆ ಬಿದ್ದು ಅಮಿತಾಭ್‌ ಬಚ್ಚನ್‌ಗೆ ಗಾಯ

Amitabh Bachchan injured after falling while shooting for 'Project K'
Photo Credit : By Author

ಮುಂಬಯಿ : ಹಿರಿಯ ನಟ ಅಮಿತಾಭ್ ಬಚ್ಚನ್​ ಅವರು ಶೂಟಿಂಗ್ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಶೂಟಿಂಗ್ ವೇಳೆ ಬಿದ್ದು ಬಿರುಸಿಗೆ ಅಮಿತಾಭ್ ಬಚ್ಚನ್​ ಪಕ್ಕೆಲುಬು ಬಳಿ ಗಾಯವಾಗಿವಾಗಿದೆ.‘ಪ್ರಾಜೆಕ್ಟ್ ಕೆ’ ಚಿತ್ರದ ಶೂಟಿಂಗ್ ವೇಳೆ ಘಟನೆ ಸಂಭವಿಸಿದೆ.

ಚಿತ್ರೀಕರಣ ಹೈದರಾಬಾದ್ ಬಳಿ ನಡೆಯುತ್ತಿತ್ತು, ಸದ್ಯ ಮುಂಬಯಿಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೇರುನಟರಾಗಿರುವ ಅಮಿತಾಭ್‌ ಬಚ್ಚನ್‌ ಎರಡು ಬಾರಿ ಕೋವಿಡ್‌ ಗೆದ್ದಿದ್ದರು. ದೇಹದ ಕೆಲವೊಂದು ಅಂಗಾಂಗಗಳು ವೈಫಲ್ಯವಾಗಿದ್ದವು ಎಂದು ಅಮಿತಾಭ್‌ ಹೇಳಿಕೊಂಡಿದ್ದರು. ಆಗ ಕೆಲವು ಅಂಗಾಂಗಳು ಕೆಲಸ ಮಾಡುತ್ತಿರಲಿಲ್ಲ.‌ ಇದರ ಬಗ್ಗೆ ನಾನು ಹೆಚ್ಚಿಗೆ ಹೇಳಿದರೆ, ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾನೆ ಎಂದು ನೀವು ತಪ್ಪು ತಿಳಿಯಬಹುದು ಎಂದು ಟ್ವೀಟ್ ಮಾಡಿದ್ದರು.

ನಾನು ಇನ್ನು ಜೀವನವೇ ಮುಗಿಯಿತು ಎಂದುಕೊಂಡಿದ್ದೆ. ಆದರೆ ವೈದ್ಯರ ಸತತ ಪ್ರಯತ್ನ, ಅಭಿಮಾನಿಗಳ ಪ್ರೀತಿ, ಆಶಿರ್ವಾದ ನನ್ನನ್ನು ಕಾಪಾಡಿತು. ಅಂಗಾಂಗಳು ಮೊದಲಿನಂತೆ ಕೆಲಸ ಮಾಡದಿದ್ದರೂ, ಸದ್ಯಕ್ಕೆ ಪರವಾಗಿಲ್ಲ ಎಂದು ಅಮಿತಾಭ್‌ ಬರೆದುಕೊಂಡಿದ್ದರು ಆಗ ಅಭಿಮಾನಿಗಳು ಕಣ್ಣೀರಿಟ್ಟಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು