News Karnataka Kannada
Wednesday, May 01 2024
ಉಡುಪಿ

ಹಿಂದು ಧರ್ಮ ಅಶ್ವತ್ಥ ವೃಕ್ಷವಿದ್ದಂತೆ-ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ

Hinduism is like an ashwaththa tree: Sri Dr. Dharmapalanatha Swamiji
Photo Credit : News Kannada

ಕುಂದಾಪುರ: ಸದ್ಭಾವನೆ ಮತ್ತು ಸದ್ಧ ಭಕ್ತಿ ಸತ್ತ್ ಪ್ರೀತಿಯನ್ನು ಸೇರಿಸಿಕೊಂಡು ಸಮಾಜ ಬಾಂಧವರು ಧಾರ್ಮಿಕ ಪೂಜೆ ಮುಖೇನ ಸಮ್ಮಿಲನಗೊಂಡಿರುವುದು ಶ್ಲಾಘನೀಯವಾದದು.

ಎಲ್ಲರನ್ನು ಒಗ್ಗೂಡಿಸಿಕೊಂಡು ಅನ್ಯೋನ್ಯತೆಯಲ್ಲಿ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಬೆಳೆಸುವ ನಿಟ್ಟಿನಲ್ಲಿ ಧೃಡವಾದ ಸಂಕಲ್ಪದೊಂದಿಗೆ ಸಮುದಾಯದ ಜನರ ಸ್ವಾವಲಂಬಿ ಬದುಕಿಗೆ ನೆಲೆಯನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಸಂಘಟನೆಗಳು ಇಂದು ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ.

ಹಿಂದು ಧರ್ಮದ ಮೂಲ ಅಶ್ವತ್ಥ ವೃಕ್ಷವಿದ್ದಂತೆ ಹಿಂದು ಧರ್ಮದಲ್ಲಿರುವ ಜಾತಿಗಳಿಗೆ ಸಂಘಟನೆಗಳು ಕೂಡ ಮುಖ್ಯವಾಗಿದೆ ಎಂದು ಶ್ರೀಕ್ಷೇತ್ರ ಆದಿಚುಂಚನಗಿರಿ ಶಾಖಾ ಮಠ ಕಾವೂರು ಮಂಗಳೂರು ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ನುಡಿದರು.

ಬೈಂದೂರು ತಾಲೂಕಿನ ಗೋಳಿಹೊಳೆ ಮೂರ್ಕೈ ಮಹಿಷಾಮರ್ಧಿನಿ ಸಭಾ ಭವನದಲ್ಲಿ ಭಾನುವಾರ ನಡೆದ ಕುಂದಾಪುರ ಹಾಗೂ ಬೈಂದೂರು ತಾಲೂಕು ಒಕ್ಕಲಿಗ ಗೌಡರ ಸೇವಾ ಸಂಘದ ರಜತ ಮಹೋತ್ಸವ ಮತ್ತು ಸಮುದಾಯಗಳ ಸಮ್ಮೀಲನ ಕಾರ್ಯಕ್ರಮ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆರ್ಶೀವಚನ ನೀಡಿದರು.

ಇಂದಿನ ಯುವಕರ ಮನಸ್ಥಿತಿಯನ್ನು ಅಥೈಸಿಕೊಂಡು ಸಮಾಜವನ್ನು ಬೆಳೆಸಬೇಕಾಗಿದೆ ಈ ನಿಟ್ಟಿನಲ್ಲಿ ಸಂಘಟನೆಗಳು ಕೆಲಸವನ್ನು ಮಾಡಬೇಕು ಯಳವೆಯಲ್ಲೆ ಯುವಕರ ಕೈಗೆ ಜವಾಬ್ದಾರಿಯನ್ನು ನೀಡಿದಾಗ ಮಾತ್ರ ಅವರ ಬದುಕು ಜಾಗ್ರತಗೊಳ್ಳುತ್ತದೆ.

ಮಕ್ಕಳನ್ನು ಸುಸಂಸ್ಕ್ರತರನ್ನಾಗಿ, ಸ್ವಾಲಂಬಿಗಳಾಗಿ, ವಿದ್ಯಾವಂತರನ್ನಾಗಿ ಮಾಡಿದರೆ ಮಾತ್ರ ಅವರ ಮುಂದಿನ ಜೀವನ ಸುಲಭವಾಗಲಿದೆ.

ಒಂದು ಸಮುದಾಯದ ಸಂಘಟನೆಗಳನ್ನು ಕಟ್ಟುವುದು ಅಷ್ಟು ಸುಲಭದ ಮಾತ್ತಲ್ಲ ಎಲ್ಲರೂ ಏಕ ಮನಸ್ಸಿನಿಂದ ಒಟ್ಟಾದರೆ ಮಾತ್ರ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ. ಸಂಕುಚಿತ ಮನೋಭಾವವನ್ನು ಬಿಟ್ಟು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಮಾಜ ಬಾಂಧವರು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.

ಸಂಘ ಜೀವಿಯಾದ ಪ್ರತಿಯೊಬ್ಬರಿಗೂ ಕರ್ತವ್ಯವಿದೆ ಆಚಾರ ವಿಚಾರಗಳು ಕಟ್ಟು ಕಟ್ಟಲೆಗಳು ನಶಿಸಿ ಹೋಗುತ್ತಿರುವ ಹೊತ್ತಿನಲ್ಲಿ ಇವುಗಳನ್ನು ಉಳಿಸಿ ಬೆಳೆಸುವ ಸಂರಕ್ಷಿಸುವ ಕೆಲಸ ಆಯಾಯ ಸಮುದಾಯ ಜನರು ಮಾಡಬೇಕಾಗಿದೆ ಸಮುದಾಯಗಳಲ್ಲಿ ಒಗ್ಗಟ್ಟಿದ್ದರೆ ಮಾತ್ರ ಹಿಂದು ಧರ್ಮ ಉಳಿಯಲಿದೆ.
ಮಠ ಮತ್ತು ರಾಜ್ಯ ಸಂಘ ನಿಮ್ಮ ಬೆಂಬಲಕ್ಕೆ ಸದಾ ನಿಲ್ಲಲಿದೆ ಸಮುದಾಯ ಭವನದ ನಿರ್ಮಾಣಕ್ಕೂ ಆರ್ಥಿಕ ನೆರವನ್ನು ಒದಗಿಸಿಕೊಡಲಾಗುವುದು ಎಂದು ಹೇಳಿದರು.

ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಮಾತನಾಡಿ ಗೌಡ ಸಮಾಜ ಬಾಂಧವರು ಸಾತ್ವಿಕರು,ದೈವ ಭಕ್ತರು ಆಗಿದ್ದಾರೆ,ಇಂದಿನ ದಿನಗಳಲ್ಲಿ ಸಂಘಟನೆಗಳನ್ನು ಕಟ್ಟಿಕೊಳ್ಳುವುದು ಮುಖ್ಯವಾಗಿದೆ ಸಂಘಟನೆಗಳ ಮೂಲಕ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ.ಸಮುದಾಯ ಭವನದ ನಿರ್ಮಾಣಕ್ಕೆ ವೈಯಕ್ತಿಕವಾಗಿ 5ಲಕ್ಷ.ರೂ ನೀಡಲಾಗುವುದು ಮುಂದಿನ ದಿನಗಳಲ್ಲಿ ಸರಕಾರದ ವತಿಯಿಂದ ಗರಿಷ್ಠ ಅನುದಾನವನ್ನು ಒದಗಿಸಿಕೊಡಲಾಗುವುದು ಎಂದರು.

ಕುಂದಾಪುರ ಬೈಂದೂರು ಒಕ್ಕಲಿಗ ಗೌಡರ ಸೇವಾ ಸಂಘ ಗೋಳಿಹೊಳೆ ಅಧ್ಯಕ್ಷ ಮಂಜು ಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ದಾನಿಗಳ ಸಹಕಾರ ಮತ್ತು ಮನೆ ಮನೆ ಭೇಟಿಮಾಡಿ ಸದಸ್ಯತ್ವವನ್ನು ಮಾಡುವುದರ ಮೂಲಕ ಸಂಘಗಕ್ಕೆ ಆರ್ಥಿಕ ವ್ಯವಸ್ಥೆ ಮಾಡಲಾಗಿದ್ದು,ಸಂಘದ ಹಣದಿಂದಲೇ ನಿವೇಶನ ಖರೀದಿ ಮಾಡಲಾಗಿದೆ ಒಕ್ಕಲಿಗ ಮಾತ್ರ ಸಂಘದಿಂದ ನೆರವನ್ನು ಮುಂದಿನ ದಿನಗಳಲ್ಲಿ ನಿಡಬೇಕು ಎಂದು ಕೇಳಿಕೊಂಡರು.

ಮಾಜಿ ಶಾಸಕ ಕೆ,ಗೋಪಾಲ ಪೂಜಾರಿ ಮಾತನಾಡಿ ಸಂಘವು ಬಹಳ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಒಗ್ಗಟ್ಟಿನಿಂದ ಬಲವಿದೆ ಮುಂದಿನ ದಿನಗಳಲ್ಲಿ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಉಡುಪಿ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ ಅಧ್ಯಕ್ಷ ತುಕರಾಮ್ ಮತ್ತು ಕಾರ್ಯದರ್ಶಿ ಹೇಮಾನಂದ,ಬೈಂದೂರು ಪಿಎಸ್‍ಐ ನಿರಂಜನ ಗೌಡ ಶುಭಹಾರೈಸಿದರು.

ಗೋಳಿಹೊಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ,ಗ್ರಾಮ ಪಂಚಾಯತ್ ಸದಸ್ಯರಾದ ಸುಮತಿ,ಅಂಬಿಕಾ,ಶಾರದ, ಮತ್ತಿತರರು ಉಪಸ್ಥಿತರಿದ್ದರು.

ರಾಷ್ಟ್ರಮಟ್ಟದ ಕ್ರೀಡಾ ಪ್ರತಿಭೆ ಸುಬ್ರಹ್ಮಣ್ಯ,ಗಡಿಭದ್ರತಾ ಪಡೆ ಮಹಿಳಾ ಸೇನಾನಿ ವಿದ್ಯಾ ಗೌಡ,ಉಪನ್ಯಾಸಕ ಮಾಧವ ಗೌಡ ಕಾನಗದ್ದೆ,ಅನಿಲ್ ರಾಜ್ ವಾಯುಸೇನೆ ಅವರನ್ನು ಸನ್ಮಾನಿಸಲಾಯಿತು.2021-22ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಯಲ್ಲಿ ಅಧಿಕ ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಲೇಕ್ಕ ಪರಿಶೋಧಕ ಬಾಬುಗೌಡ ಜಡ್ಡಾಡಿ ಸ್ವಾಗತಿಸಿದರು.ಸಂಜೀವ ಗೌಡ ಕೂರಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸುಧೀಂದ್ರ ಗೌಡ ಮತ್ತು ಜಯರಾಮ ಗೌಡ ನಿರೂಪಿಸಿದರು. ಉದಯ ಗೌಡ ವಂದಿಸಿದರು.

ಕಲಶ ಕುಂಭದೊಂದಿಗೆ ಬೆಂಡು,ವಾದ್ಯಘೋಷದ ಮೂಲಕ ಭವ್ಯ ಮೆರವಣಿಗೆಯಲ್ಲಿ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಗಳನ್ನು ಬರಮಾಡಿಕೊಳ್ಳಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು