News Karnataka Kannada
Sunday, May 05 2024
ಮನರಂಜನೆ

ಅಧಿಕೃತವಾಗಿ ಭಾರತೀಯ ಪ್ರಜೆಯಾದ ಬಾಲಿವುಡ್ ನಟ ಅಕ್ಷಯ್​ ಕುಮಾರ್

Akshay Kumar
Photo Credit : Twitter
ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಭಾರತೀಯ ಪೌರತ್ವ ಪಡೆದಿದ್ದು, ಈ ಮೂಲಕ ಅಧಿಕೃತವಾಗಿ ಭಾರತೀಯ ಪ್ರಜೆಯಾಗಿದ್ದಾರೆ. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಭಾರತೀಯ ಪೌರತ್ವ ಸಿಕ್ಕಿರುವ ಬಗ್ಗೆ ನಟ ಅಕ್ಷಯ್ ಕುಮಾರ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮನಸ್ಸು ಮತ್ತು ಪೌರತ್ವ ಎರಡೂ ಹಿಂದೂಸ್ತಾನಿ, ಸ್ವಾತಂತ್ರ್ಯ ದಿನದ ಶುಭಾಶಯಗಳು, ಜೈ ಹಿಂದ್​ ಎಂದು ಬರೆದುಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ವೈಯಕ್ತಿಕ ಪರಿಸ್ಥಿತಿ ನಟನನ್ನು ಕೆನಡಾ ಪೌರತ್ವ ಆಯ್ದುಕೊಳ್ಳುವಂತೆ ಪ್ರೇರೇಪಿಸಿತು. ಕೆನಡಾ ಪೌರತ್ವ ಹೊಂದಿದ್ದ ವಿಷಯ ನಟನನ್ನು ಟೀಕೆಗೊಳಗಾಗುವಂತೆ ಮಾಡಿತ್ತು. ಇದೀಗ ಅಂತಿಮವಾಗಿ ನಟ ಭಾರತೀಯ ಪ್ರಜೆಯಾಗಿದ್ದಾರೆ.

ಅಕ್ಷಯ್​ ಕುಮಾರ್​ ಭಾರತೀಯ ಸಿನಿಮಾ ರಂಗದ ಅತ್ಯಂತ ಪ್ರಸಿದ್ಧ ನಟರಲ್ಲಿ ಓರ್ವರು.  ನಟನನ್ನು ಗುಣಗಾನ ಮಾಡಲು ಹಲವು ಕಾರಣಗಳಿದ್ದರೆ, ಟ್ರೋಲ್​ ಮಾಡಲು ಪೌರತ್ವದ ವಿಷಯವಿತ್ತು. ಟ್ರೋಲರ್​ಗಳು ಅಕ್ಷಯ್ ಕುಮಾರ್ ಅವರನ್ನು ಕೆನಡಿಯನ್​​ ಕುಮಾರ್​ ಎಂದೇ ಗುರುತಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು