ಬಂಟ್ವಾಳ : ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್, ಜನಪ್ರಿಯ ನಟಿ ರಚಿತಾ ರಾಮ್ ಅವರ ಬಣ್ಣದ ಬದುಕಿಗೆ ಈಗ 14 ವರ್ಷಗಳ ಸಂಭ್ರಮ. ಸಿನಿರಂಗದಲ್ಲಿ ಯಶಸ್ಸಿನ ಪಯಣ ಮುಂದುವರಿಸುತ್ತಿರುವ ರಚಿತಾ ರಾಮ್ ಇದೀಗ ಭಕ್ತಿಯ ಮುಖಾಂತರವೂ ಗಮನ ಸೆಳೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನ ಕೊರಗಜ್ಜ ಕ್ಷೇತ್ರದಲ್ಲಿ ನಟಿ ರಚಿತಾ ರಾಮ್ ಕೋಲ ಸೇವೆಯಲ್ಲಿ ಭಾಗಿಯಾಗಿದ್ದಾರೆ. ಬೆಂಜನಪದವು ಕೊರಗಜ್ಜ ಕ್ಷೇತ್ರ ನಲ್ಲಿ ನಡೆದ ಕೋಲ ಸೇವೆ ನಡೆದಿದೆ.

ತಮ್ಮ ಮನಸ್ಸಿನಲ್ಲಿ ನೆನೆಸಿದ ಕೆಲಸಗಳು ನೆರವೇರಿದರೆ, ಕೊರಗಜ್ಜ ದೈವಕ್ಕೆ ಕೋಲ ಸೇವೆ ಸಲ್ಲಿಸುವ ಹರಕೆ ಹೊತ್ತಿದ್ದ ರಚಿತಾ ರಾಮ್, ಇದೀಗ ಆ ಹರಕೆಯನ್ನು ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ. ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸೂಪರ್‌ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ರಚಿತಾ ರಾಮ್.

ಸದ್ಯ ರಚಿತಾ ರಾಮ್, ಧ್ರುವ ಸರ್ಜಾ ಜೊತೆ ಕ್ರಿಮಿನಲ್, ಸತೀಶ್ ನೀನಾಸಂ ಜೊತೆ ʻಅಯೋಗ್ಯ 2ʼ ಸಿನಿಮಾದಲ್ಲಿ ನಟಿಸುತ್ತಿದ್ದು, ತಮಿಳಿನಲ್ಲಿ ದೊಡ್ಡ ನಿರ್ಮಾಣ ಸಂಸ್ಥೆ ಜೊತೆ ಮಾತುಕತೆ ನಡೆದಿದ್ದು, ತೆಲುಗಿನಲ್ಲಿ ಎರಡು ಸಿನಿಮಾಗಳು ಈ ತಿಂಗಳಲ್ಲಿ ಅನೌನ್ಸ್ ಆಗಲಿದೆ.

View this post on Instagram

A post shared by News Karnataka (@newskarnataka)