ಉಡುಪಿ: ಒಂಟಿಯಾಗಿದ್ದ ವೃದ್ಧೆಯ ಸಮಸ್ಯೆ ಹೇಳಿಕೊಂಡು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ಗೆ ಅಹವಾಲು ಸಲ್ಲಿಸಲು ಮುಸ್ಲಿಂ ಮಹಿಳೆಯರು ಬಂದಿದ್ದರು.

ಹಿಂದೂ ಮಹಿಳೆಯ ಮನೆ ನಿರ್ಮಾಣ ಸಮಸ್ಯೆ ಕುರಿತು ಮಹಿಳೆಯರು ಗಮನ ಸೆಳೆದರು. ಸಮಸ್ಯೆ ಬಗ್ಗೆ ವಿವರಿಸುವಾಗ ಮಹಿಳೆಯರು ಭಾವುಕರಾದರು. ಇದು ಹಿಂದೂ ಮುಸ್ಲಿಂ ಬಾಂಧವ್ಯ ಎಂದು ಹೆಬ್ಬಾಳ್ಕರ್ ಬಣ್ಣಿಸಿದರು.

ಬಿಜೆಪಿಯವರು ಇದನ್ನು ನೋಡಿ ಕಲಿಯಿರಿ ಎಂದು ಸಚಿವೆ ಚಾಟಿ ಬೀಸಿದರು. ಖಂಡಿತವಾಗಿ ನಿಮ್ಮ ಸಮಸ್ಯೆ ಬಗ್ಗೆ ಹರಿಸುತ್ತೇನೆ ಎಂದು ಹೆಬ್ಬಾಳ್ಕರ್ ಆಶ್ವಾಸನೆ ನೀಡಿದರು.