ಹಾಲಿವುಡ್: ಹಾಸ್ಯ ನಟನಿಗೆ ಆಸ್ಕರ್ ಕಾರ್ಯಕ್ರಮದಲ್ಲಿ ಕಪಾಳಮೋಕ್ಷ ಮಾಡಿ ವಿವಾದಕ್ಕೆ ಗುರಿಯಾಗಿದ್ದ ಸ್ಟಾರ್ ನಟ ವಿಲ್ ಸ್ಮಿತ್ ಹಾಲಿವುಡ್ ಅಕಾಡೆಮಿಗೆ ರಾಜೀನಾಮೆ ನೀಡಿದ್ದಾರೆ.
ಆಸ್ಕರ್ ಅಕಾಡೆಮಿ ಮುಖಂಡರ ಜೊತೆ ವೀಡಿಯೋ ಕಾನ್ಫರೆನ್ಸ್ ನಲ್ಲಿ ವಿಚಾರಣೆ ಎದುರಿಸಿದ್ದ ವಿಲ್ ಸ್ಮಿತ್ ಭಾನುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಹಾಲಿವುಡ್ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಅಂಡ್ ಆರ್ಟ್ಸ್ ಅಂಡ್ ಸೈನ್ಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ.
ನಟ ಕ್ರಿಸ್ ಅವರ ಮೇಲೆ ಹಲ್ಲೆ ನಡೆಸಿದ್ದರಿಂದ ನನ್ನ ವರ್ತನೆಗೆ ಬಗ್ಗೆ ನನಗೆ ಆಘಾತ, ನೋವು ಆಗಿದೆ. ಆದ್ದರಿಂದ ಹಾಲಿವುಡ್ ಅಕಾಡೆಮಿಗೆ ರಾಜಿನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.