News Karnataka Kannada
Saturday, April 27 2024
ವಿದೇಶ

ಉಕ್ರೇನ್ ನಗರಗಳ ಮೇಲೆ ಮುಂದುವರಿದ ರಷ್ಯಾ ಕ್ಷಿಪಣಿ ದಾಳಿ

Russia
Photo Credit :

ಕೀವ್‌: ಉಕ್ರೇನ್‌ನ ಎರಡು ನಗರಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, ಮೂಲ ಸೌಕರ್ಯ ಹಾಗೂ ವಸತಿ ಕಟ್ಟಡಗಳಿಗೆ ಹಾನಿಯಾಗಿದೆ.

‘ಪೊಲ್ಟಾವ ನಗರದ ಮೂಲಸೌಕರ್ಯದ ಮೇಲೆ ಶುಕ್ರವಾರ ತಡರಾತ್ರಿ ದಾಳಿಯಾಗಿದೆ.ಪೊಲ್ಟಾವ ನಗರವು ಉಕ್ರೇನ್‌ನ ರಾಜಧಾನಿ ಕೀವ್‌ನ ಪೂರ್ವಕ್ಕಿರುವ ಪೊಲ್ಟಾವ ಪ್ರಾಂತ್ಯದ ರಾಜಧಾನಿಯಾಗಿದೆ. ಕ್ರೆಮೆನ್ಚುಕ್‌ ಈ ಭಾಗದ ಪ್ರಮುಖ ನಗರಗಳಲ್ಲಿ ಒಂದಾಗಿದೆ.

ಕ್ರೆಮೆನ್ಚುಕ್‌ ನಗರದ ಮೇಲೆ ಇಂದು (ಶನಿವಾರ ಏಪ್ರಿಲ್‌ 2) ಬೆಳಿಗ್ಗೆ ಹಲವು ಸಲ ದಾಳಿ ನಡೆದಿದೆ’ ಎಂದು ಪೊಲ್ಟಾವ ಪ್ರಾಂತ್ಯದ ಅಧಿಕಾರಿ ಡಿಮಿಟ್ರಿ ಲುನಿನ್‌ ತಿಳಿಸಿದ್ದಾರೆ.ದಾಳಿಯಿಂದಾಗಿ ಸಾವು ಸಂಭವಿಸಿರುವ ಬಗ್ಗೆ ಸದ್ಯ ಯಾವುದೇ ಮಾಹಿತಿ ಇಲ್ಲ ಎಂದು ಲುನಿನ್ ತಿಳಿಸಿದ್ದಾರೆ.

ರಷ್ಯಾ ಸೇನೆ ಪಡೆಗಳು ಫೆಬ್ರುವರಿ 24ರಂದು ಉಕ್ರೇನ್‌ ಮೇಲೆ ಆಕ್ರಮಣ ಆರಂಭಿಸಿದ್ದವು. ಉಕ್ರೇನ್‌ ಸೇನೆಯೂ ಪ್ರತಿದಾಳಿ ನಡೆಸುತ್ತಿದೆ.

ಯುದ್ಧವು ಇದೀಗ 37 ದಿನಗಳನ್ನು ಪೂರೈಸಿದೆ. ಸಂಘರ್ಷ ಶಮನಗೊಳಿಸಲು ಉಭಯ ರಾಷ್ಟ್ರಗಳ ರಾಜತಾಂತ್ರಿಕರ ನಡುವೆ ಶಾಂತಿ ಮಾತುಕತೆ ನಡೆಯುತ್ತಿದೆ. ಆದಾಗ್ಯೂ, ಪರಸ್ಪರರ ಆಯಕಟ್ಟಿನ ಸೇನಾ ತಾಣಗಳ ಮೇಲೆ ದಾಳಿ-ಪ್ರತಿ ದಾಳಿ ನಿರಂತರವಾಗಿ ಮುಂದುವರಿದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು