ನಟಿ ಸಮಂತಾ ಅಕ್ಕಿನೇನಿ ವಿಭಿನ್ನ ಪಾತ್ರಗಳನ್ನು ಮಾತ್ರ ಮಾಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಫ್ಯಾಮಿಲಿ ಮ್ಯಾನ್-2ನಲ್ಲಿ ಸಮಂತಾ ಅಭಿನಯ ನೋಡಿ ಬಾಲಿವುಡ್ ಕೂಡ ಫಿದಾ ಆಗಿದೆ.
ಅಂತೆಯೇ ಬಾಲಿವುಡ್ ನಟನೊಬ್ಬ ಸಮಂತಾ ಜೊತೆ ಕೆಲಸ ಮಾಡಬೇಕು ಅನ್ನೋ ಇಚ್ಛೆಯನ್ನು ಹೊರಹಾಕಿದ್ದಾರೆ.
ಇದು ಬೇರ್ಯಾರೂ ಅಲ್ಲ, ಶಾಹಿದ್ ಕಪೂರ್!
ಶಾಹಿದ್ ಈಗಾಗಲೇ ಅರ್ಜುನ್ ರೆಡ್ಡಿ ಸಿನಿಮಾದ ಹಿಂದಿ ರಿಮೇಕ್ ಕಬೀರ್ ಸಿಂಗ್ ಮಾಡಿ ಗೆದ್ದಿದ್ದಾರೆ. ಇದೀಗ ತೆಲುಗು ಸೂಪರ್ ಹಿಟ್ ಸಿನಿಮಾ ಜರ್ಸಿ ರಿಮೇಕ್ ಕೂಡ ಶಾಹಿದ್ ಮಾಡುತ್ತಿದ್ದಾರೆ.
ಇದೇ ಸಮಯದಲ್ಲಿ ಅಭಿಮಾನಿಯೊಬ್ಬರು ಸಮಂತಾ ಅವರ ನಟನೆ ಬಗ್ಗೆ ಏನಾದ್ರು ಹೇಳಿ ಎಂದು ಶಾಹಿದ್ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಶಾಹಿದ್, ಅವರ ಪರ್ಫಾಮೆನ್ಸ್ ಸಿಕ್ಕಾಪಟ್ಟೆ ಚೆನ್ನಾಗಿದೆ. ನನಗೂ ಅವರ ಜೊತೆ ಕೆಲಸ ಮಾಡುವ ಆಸೆ ಇದೆ ಎಂದು ಹೇಳಿದ್ದಾರೆ.