ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ಹಾಗೂ ಪತಿ ಅಶ್ವಿನ್ ಅವರ 6ವರ್ಷದ ದಾಂಪತ್ಯ ಜೀವನ ಮುರಿದು ಬೀಳಲು ಇವರಿಬ್ಬರ ನಡುವೆ ಆಸಕ್ತಿ ಮತ್ತು ಪ್ರೀತಿ ಕಡಿಮೆಯಾದದ್ದೇ ಕಾರಣವೆಂದು ಹೇಳಲಾಗುತ್ತಿದೆ.
ಹೆಸರಿಗಾಗಿ ಮದುವೆ ಮಾಡಿಕೊಂಡಂತಹ ಈ ಜೋಡಿ, ಮದುವೆಗೂ ಮೊದಲೇ 4ವರ್ಷ ಡೇಟಿಂಗ್ ನಡೆಸಿದ್ದು, ಇತ್ತೀಚೆಗೆ ಇವರಿಬ್ಬರ ನಡುವೆ ಮಾತುಕತೆಯೂ ಆಷ್ಟಕಷ್ಟೆ ಎಂದು ಹೇಳಲಾಗುತ್ತಿದೆ. ಇದೀಗ ಇಬ್ಬರ ದಾಂಪತ್ಯ ಜೀವನ ಕೇವಲ ಸಣ್ಣ ವಿಷಯಕ್ಕೆ ವಿಚ್ಛೇದನ ಆಗಲಿದ್ದು, ಈ ಜೋಡಿಗೆ ಓರ್ವ ಮಗನಿದ್ದು, ಇವರಿಬ್ಬರು 2010 ರಲ್ಲಿ ಮದುವೆಯಾಗಿದ್ದರು.