News Karnataka Kannada
Sunday, May 12 2024
ನುಡಿಚಿತ್ರ

ಅನೈತಿಕ ಚಟುವಟಿಕೆಯ ತಾಣವಾಗುತ್ತಿದೆ ಅಯ್ಯನಕೆರೆ ಪ್ರವಾಸಿ ಸ್ಥಳ

Photo Credit :

ಅನೈತಿಕ ಚಟುವಟಿಕೆಯ ತಾಣವಾಗುತ್ತಿದೆ ಅಯ್ಯನಕೆರೆ ಪ್ರವಾಸಿ ಸ್ಥಳ

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿಗರ ಪಾಲಿನ ಸ್ವರ್ಗವೇ ಸರಿ. ಇದರ ಸಾಲಿಗೆ ಸದ್ಯ ಈಗ ಜಿಲ್ಲೆಯ ಅಯ್ಯನಕೆರೆ ರಜಾ ದಿನಗಳಲ್ಲಿ ಪ್ರವಾಸ ಕೈಗೊಳ್ಳುವವರನ್ನು ಕೈಬೀಸಿ ಕರೆಯುತ್ತಿದೆ. ಸುತ್ತ-ಮುತ್ತಲ ಬೆಟ್ಟಗುಡ್ಡಗಳು ಹಸಿರಿನಿಂದ ಶೃಂಗಾರಗೊಂಡಿದ್ದು, ಎಲ್ಲಿ ನೋಡಿದರಲ್ಲಿ ಹಸಿರು ಕಣ್ಮನ ಸೂರೆಗೊಳ್ಳುತ್ತಿದೆ. ಆದರೆ ದಿನದಿಂದ ದಿನಕ್ಕೆ ಈ ಸ್ಥಳ ಅನೈತಿಕ ಚಟುವಟಿಕೆ ತಾಣವಾಗುತ್ತಿದೆ.


ಸುತ್ತಲೂ ಎತ್ತ ನೋಡಿದರೂ ಹಚ್ಚ ಹಸಿರುನಿಂದ ಕಾಣ್ಣುವ ಕೆರೆ , ಸುತ್ತಲೂ ಗುಡ್ಡಗಳಿಂದ ತುಂಬಿಕೊಂಡಿರುವ ಮಧ್ಯೆ ಮರಗಿಡಗಳ  ದೃಶ್ಯ. ಇದು ಚಿಕ್ಕಮಗಳೂರಿನ ಅಯ್ಯನ ಕೆರಯ ಸೊಬಗು. ಚಿಕ್ಕಮಗಳೂರಿಂದ ಕಡೂರಿಗೆ ತೆರಳುವ ಮಾರ್ಗ ಮಧ್ಯೆ ಎದುರಾಗುವ ಸಖರಾಯಪಟ್ಟಣದ ಸಮೀಪ ಅಯ್ಯನಕೆರೆ ಇದೆ. ನೀರು ತುಂಬಿದಾಗ ಏಳು ಗುಡ್ಡಗಳು ಜಲಾವೃತವಾಗುತ್ತವೆ. ಸುತ್ತಲೂ ಬೆಟ್ಟಗುಡ್ಡಗಳು. ಕಣ್ಣುಕುಕ್ಕುವ ಹಸಿರು. ಅಡಿಕೆ ತೋಟ, ಕಬ್ಬು, ಬತ್ತದ ಗದ್ದೆಗಳ ಕಣಜ. ಈ ಕೆರೆ ಸುತ್ತಮತ್ತುಲಿನ ಪ್ರಕೃತಿ ಸೌಂದರ್ಯವನ್ನು ನೋಡತ್ತಿದ್ದರೆ, ಮನಸ್ಸು ನಿರಾಳವಾಗುತ್ತದೆ. ಸುಮಾರು 3000 ಸಾವಿರ ಎಕರೆ ವಿಸ್ತರಣೆ ಹೊಂದಿರುವ ಕೆರೆ ಇದಾಗಿದೆ. 2000ಕ್ಕೂ ಅಧಿಕ ತೋಟ , ಗೆದ್ದಗಳಿಗೆ ನೀರೂಣಿಸುವ ಜೀವನಾಡಿ. ಅಯ್ಯನಕೆರೆಗೆ 700 ವರ್ಷದ ಇತಿಹಾಸವಿದೆ. ಕೆರೆಯ ಪ್ರಕೃತಿಕ ಸೌಬಗನ್ನು ನೋಡಲು ಪ್ರವಾಸಿಗರು ಆಗಮಿಸಿ ಒತ್ತಡ ಜೀವನದಿಂದ ಸ್ವಲ್ಪ ವಿಶಾಂತ್ರಿ ಪಡೆಯುಲು ಇದು ಸೂಕ್ತ ಸ್ಥಳವಾಗಿದೆ.ಇದಕ್ಕೂ ಮಿಗಿಲಾಗಿ ಜಲರಾಶಿ ತುಂಬಿ ಸಮುದ್ರದ ದೃಶ್ಯ ಸೃಷ್ಟಿಸುವ ಕೆರೆ ಅಂಗಳ. ಒಮ್ಮೆ ಇಳಿದು ಆಡುವ ಮನಸ್ಸು. ವಾರದ ರಜೆಯನ್ನು ಕಳೆಯಲು ಪ್ರವಾಸಿಗರಿಗೆ ಇದು ಪ್ರಶಸ್ತ ಸ್ಥಳವಾಗಿದೆ.

ಪ್ರವಾಸಕ್ಕೆಂದು ಬರುವ ಪ್ರವಾಸಿಗರಿಗಿಂತ ಮೋಜು ಮಸ್ತಿಗಾಗಿ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಪ್ರತಿ ನಿತ್ಯ ಈ ಸ್ಥಳ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಾಡಗುತ್ತಿದೆ. ಪ್ರೇಮಿಗಳಿಗೂ ಹೇಳಿ ಮಾಡಿಸಿದಂತಹ ಸ್ಥಳವಾಗಿದ್ದು, ಪುಂಡ ಪೋಕರಿಗಳಿಗೆ ಮಧ್ಯ ಸೇವನೆಗೆ ಮತ್ತು ಮಾಂಸಹಾರ ಊಟಕ್ಕೆ ತುಂಬಾ ಹೇಳಿ ಮಾಡಿಸಿದಂತಹ ಸ್ಥಳವಾಗಿದ್ದು, ಇಲ್ಲಿನ ಅವ್ಯವಸ್ಥೆಯನ್ನು ಯಾರೂ ಕೇಳದೇ ಪುಂಡರ ಹಾವಳಿಗೆ ಲಗಾಮು ಇಲ್ಲದಂತಾಗಿದೆ. ಒಟ್ಟಾರೆಯಾಗಿ ಅಯ್ಯನಕೆರ ಇಡೀ ಚೆಲುವನ್ನು ತನ್ನಲ್ಲಿ ಮನೆ ಮಾಡಿದೆ. ಕೆರೆಯಲ್ಲಿ ಮೀನುಗಾರಿಗೂ ಅವಕಾಶ ಇರುವುದಿಂದ ಸ್ಥಳೀಯರಿಗೆ ಉದ್ಯೋಗವನ್ನು ದೊರೆಕಿಸಿದೆ. ಕೆರೆಗೆ ಭೇಟಿ ನೀಡಲು ವಾಹನದ ಸೌಲಭ್ಯವೂ ಇದೆ.ಆದರೆ ಇಲ್ಲಿನ ಅನೈತಿಕ ಚಟುವಟಿಕೆಗೆ ಬ್ರೇಕ್ ಹಾಕಿದ್ದರೇ ಇನ್ನಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಸಾಧ್ಯತೆ ಇದ್ದು ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಇನ್ನಷ್ಟು ಶ್ರೀಮಂತಿಕೆ ದೊರೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು