ಬೆಂಗಳೂರು: ಕಿರಿಕ್ ಹುಡುಗಿ ನಟಿ ಸಂಯುಕ್ತ ಹೆಗಡೆ ಅತಿಥಿಯಾಗಿ ಕೆಲವು ದಿನಗಳ ಹಿಂದೆ ಬಿಗ್ ಬಾಸ್ ಶೋ ಎಂಟ್ರಿ ನೀಡಿದ ಬೆನ್ನಲ್ಲೇ ದೊಡ್ಡ ಮನೆ ಒಳಗಡೆ ಕಿರಿಕ್ ಮಾಡಿ ಮನೆಯಿಂದ ಜೌಟ್ ಆಗಿದ್ದಾರೆ. ಬಿಗ್ ಬಾಸ್ ಒಳಗಡೆ ನಡೆದ ಟಾಸ್ಕ್ ಒಂದರಲ್ಲಿ ನಟಿ ಸಂಯುಕ್ತ ಹೆಗಡೆ ಭಾರೀ ಹೈಡ್ರಾಮ ಮಾಡಿದ್ದಾರೆ. ಮೈ ಮುಟ್ಟಿದ್ರೆ ತಟ್ಬೀಡ್ತಿನಿ ಅಂದವರು ರೌಡಿಯಂತೆ ಸಮೀರ್ ಆಚಾರ್ಯ ಅವರ ಕೆನ್ನೆಗೆ ಬಾರಿಸಿದ್ದಾರೆ.
ಆ ನಂತರ ಬಿಗ್ ಬಾಸ್ ಒಳಗಡೆ ದೈಹಿಕ ಹಲ್ಲೆಗೆ ಅನುಮತಿ ಇಲ್ಲ ಎಂದು ಆದೇಶ ನೀಡಿದ ಬಳಿಕ ಸಂಯುಕ್ತಾ ಹೆಗ್ಡೆಯನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸಲಾಯಿತು.
ಘಟನೆ ಹಿನ್ನೆಲೆ: ಬುಧವಾರ ಸ್ಪರ್ಧಿಗಳಿಗೆ ಟಾಸ್ಕ್ ವೊಂದನ್ನು ನೀಡಲಾಗಿತ್ತು. ಅದರಂತೆ ಮಹಿಳಾ ತಂಡ ಹಾಗೂ ಪುರುಷ ತಂಡದ ಎಂದು ಎರಡು ವಿಭಾಗವನ್ನು ಮಾಡಿ ದಾರ ಕಟ್ಟಿದ ಗೋಪುರವನ್ನು ನೀಡಲಾಗಿತ್ತು. ಪುರುಷ ಸ್ಪರ್ಧಿಗಳು ಮಹಿಳಾ ಸ್ಪರ್ಧಿಗಳ ಬಳಿ ಇರುವ ಗೋಪುರದ ದಾರವನ್ನು ಕತ್ತರಿಯಿಂದ ಕತ್ತರಿಸಬೇಕಿತ್ತು. ಈ ವೇಳೆ ತನ್ನನ್ನು ಸಮೀರ್ ಆಚಾರ್ಯ ಸಂಯುಕ್ತ ಹೆಗ್ಗಡೆಯವರನ್ನು ಮುಟ್ಟಿದ್ರು ಅಂತ ಸಮೀರ್ ಆಚಾರ್ಯ ಮೇಲೆ ಕೈ ಮಾಡಿದ್ದಾರೆ.
ಈ ಕಾರಣದಿಂದ ಟಾಸ್ಕ್ ಅರ್ಧಕ್ಕೆ ನಿಲ್ಲಿಸಲಾಯಿತು.