News Karnataka Kannada
Sunday, May 19 2024
ಮನರಂಜನೆ

ಪಾರ್ಚೆಡ್ ಸಿನಿಮಾ ಮೂಲಕ ದೊಡ್ಡ ವಿವಾದಕ್ಕೆ ಸಿಲುಕಿಕೊಂಡ ಬಹುಭಾಷಾ ನಟಿ ರಾಧಿಕಾ ಆಪ್ಟೆ

Photo Credit :

ಪಾರ್ಚೆಡ್ ಸಿನಿಮಾ ಮೂಲಕ ದೊಡ್ಡ ವಿವಾದಕ್ಕೆ ಸಿಲುಕಿಕೊಂಡ ಬಹುಭಾಷಾ ನಟಿ ರಾಧಿಕಾ ಆಪ್ಟೆ

‘ವಾಹ್’ ಸಿನಿಮಾ ಮೂಲಕ ಬಾಲಿವುಡ್ ಗೆ ಕಾಲಿಟ್ಟ ಬಹುಭಾಷಾ ನಟಿ ರಾಧಿಕಾ ಆಪ್ಟೆ, ಇದೀಗ ಪಾರ್ಚೆಡ್ ಸಿನಿಮಾ ಮೂಲಕ ದೊಡ್ಡ ವಿವಾದ ಮಾಡಿಕೊಂಡಿದ್ದರು. 

 

ಚಿಕ್ಕ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಬಳಿಕ ಬಂಗಾಳಿ, ಮರಾಠಿ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ರಾಧಿಕಾ ಆಪ್ಟೆ, ಪಾರ್ಚೆಡ್ ಸಿನಿಮಾದಲ್ಲಿ ನಟಿಸಿರುವ ಬೆತ್ತಲೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದ್ದು, ಬಹಳಷ್ಟು ಮಾತುಗಳಿಗೆ ಕಾರಣವಾಗಿದೆ.  

 

ಈ ಬಗ್ಗೆ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ರಾಧಿಕಾ ಆಪ್ಟೆ, ‘ನನಗೆ ನಿಜವಾಗಿಯೂ ಈ ರೀತಿಯ ಪಾತ್ರ ಮಾಡಲು ಇಷ್ಟ. ಏಕೆಂದರೆ ನೀವು ಬಾಲಿವುಡ್ ನಲ್ಲಿ ಇರುವಾಗ ನಿಮ್ಮ ದೇಹದೊಂದಿಗೆ ಹೇಗೆ ಇರಬೇಕು ನಿರಂತರವಾಗಿ ಹೇಳಲಾಗುತ್ತದೆ. ನಾನು ಅದನ್ನೂ ಯಾವಾಗಲೂ ನಿರ್ವಹಿಸುತ್ತೇನೆ’ ಎಂದಿದ್ದಾರೆ. 

 

ಇನ್ನು ಈ ನಗ್ನ ವಿಡಿಯೋದ ಕುರಿತು ನಟಿ, ‘ನನ್ನ ನಗ್ನ ವಿಡಿಯೋ ಕ್ಲಿಪ್ ಲೀಕ್ ಆದಾಗ ನಾನು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದೆ. ಆಗ ನಾನು ಕ್ಲೀನ್ ಶೆವೆನ್ ಚಿತ್ರದಲ್ಲಿ ನಟಿಸುತ್ತಿದ್ದೆ. ಅದು ನನಗೆ ತುಂಬಾ ಕೆಟ್ಟದಾಗಿ ಪರಿಣಾಮ ಬೀರಿತು. ನಾಲ್ಕು ದಿನಗಳು ಮನೆಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ನನ್ನ ಕಾರು ಚಾಲಕ, ಬಾಡಿಗಾರ್ಡ್ ಮತ್ತು ನನ್ನ ಸ್ಟೈಲಿಸ್ಟ್ ವಿಡಿಯೋಗಳನ್ನು ನೋಡಿ ನನ್ನನ್ನು ಗುರುತಿಸುತ್ತಿದ್ದರು’ ಎಂದು ಮನದ ಮಾತನ್ನು ಹಂಚಿಕೊಂಡಿದ್ದಾರೆ.

 

ಪಾರ್ಚೆಡ್ ಸಿನಿಮಾದಲ್ಲಿ ಸೆಕ್ಸ್ ವರ್ಕರ್ ಆಗಿ ಪಾತ್ರ ನಿರ್ವಹಿಸಿರುವ ರಾಧಿಕಾ, ಪ್ರಸ್ತುತ ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಓಕೆ ಕಂಪ್ಯೂಟರ್ ಸೀರಿಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು