News Karnataka Kannada
Monday, April 29 2024
ಮನರಂಜನೆ

ಬಿಗ್ ಬಾಸ್ ಸೀಸನ್ 4 ವಿನ್ನರ್ ಪ್ರಥಮ್ ಆತ್ಮಹತ್ಯೆಗೆ ಯತ್ನ

Photo Credit :

ಬಿಗ್ ಬಾಸ್ ಸೀಸನ್ 4  ವಿನ್ನರ್ ಪ್ರಥಮ್ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 4  ವಿನ್ನರ್ ಪ್ರಥಮ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.   ಆತ್ಮಹತ್ಯೆಗೆ ಯತ್ನಿಸಿರುವ ಲೈವ್ ವಿಡಿಯೋವನ್ನು ಪ್ರಥಮ್ ತಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಹಾಕಿದ್ದಾರೆ.

Kannada Big Boss season 4 winner Ollehuduga Pratham attempts suicide-1ಫೇಸ್‌ಬುಕ್ ಲೈವ್‌ನಲ್ಲೇ ಪ್ರಥಮ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಬಸವೇಶ್ವರನಗರದ ತಮ್ಮ ಮನೆಯಲ್ಲಿ ಪ್ರಥಮ್ ಈ ದುಡುಕು ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚಿನ ಕೆಲ ಘಟನೆಗಳಿಂದ ಬೇಸತ್ತಿರುವುದಾಗಿ ವಿಡಿಯೋದಲ್ಲಿ ಹೇಳಿಕೊಂಡಿರುವ ಪ್ರಥಮ್, ಮನಸಿಗೆ ಬೇಸರವಾಗಿದೆ, ಜೀವನ ಬೇಡ ಎನಿಸಿದೆ ಎಂದು ಹೇಳಿದ್ದಾರೆ.

ನಿದ್ರೆ ಮಾತ್ರೆ ಸೇವನೆಯಿಂದ ಅಸ್ವಸ್ಥರಾಗಿರುವ ಪ್ರಥಮ್‌ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವೇಶ್ಚರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು