News Karnataka Kannada
Sunday, April 28 2024
ಮನರಂಜನೆ

ಖ್ಯಾತ ಸಿತಾರ್ ವಾದಕ ಕೋವಿಡ್ ಗೆ ಬಲಿ

Photo Credit :

ಖ್ಯಾತ ಸಿತಾರ್ ವಾದಕ ಕೋವಿಡ್ ಗೆ ಬಲಿ

ನವದೆಹಲಿ: ಖ್ಯಾತ ಸಿತಾರ್ ವಾದಕ ಪ್ರತೀಕ್ ಚೌಧರಿ(49) ಅವರು ಕೊರೊನಾ ಸಂಬಂಧಿ ಆರೋಗ್ಯ ಸಮಸ್ಯೆಯಿಂದಾಗಿ ಶುಕ್ರವಾರ ನಿಧನರಾಗಿದ್ದಾರೆ.

ಪ್ರತೀಕ್ ತಂದೆ ಖ್ಯಾತ ಸಿತಾರ್‌ ವಾದಕ ಪಂಡಿತ್‌ ದೇವವ್ರತ ಚೌಧರಿ ಅವರು ಕಳೆದ ಶನಿವಾರ ನಿಧನರಾಗಿದ್ದರು. ಮೃತರಿಗೆ ಪತ್ನಿ ರುನಾ ಮತ್ತು ಪುತ್ರರಾದ ರಾಯಣ ಮತ್ತು ಅಧಿರಾಜ್ ಇದ್ದಾರೆ.

ಸಂಗೀತ ಕ್ಷೇತ್ರದ ಇತಿಹಾಸಕಾರ ಪವಾಜ್‌ ಝಾ ಅವರ ಪ್ರಕಾರ, ಪ್ರತೀಕ್ ಅವರನ್ನು ಕಳೆದ ಗುರುವಾರ ಗುರು ತೇಜ್‌ ಬಹದ್ದೂರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

‘ಪ್ರತೀಕ್ ಚೌಧರಿ, ಭರವಸೆಯ ಪ್ರತಿಭೆ. ಕೋವಿಡ್ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಒಂದು ವಾರದಿಂದ ಐಸಿಯುನಲ್ಲಿ ಜೀವನ್ಮರಣದ ಹೋರಾಟ ನಡೆಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು