News Karnataka Kannada
Thursday, May 09 2024
ಮನರಂಜನೆ

ಆಸ್ಕರ್ ರೇಸ್ ನಲ್ಲಿ ಕನ್ನಡ ಸಿನೆಮಾ ‘ರಂಗಿತರಂಗ’

Photo Credit :

ಆಸ್ಕರ್ ರೇಸ್ ನಲ್ಲಿ ಕನ್ನಡ ಸಿನೆಮಾ 'ರಂಗಿತರಂಗ'

ಹೊಸದಿಲ್ಲಿ:  ಭಾರತದಿಂದ ಅಧಿಕೃತವಾಗಿ ಆಸ್ಕರ್ ಸ್ಪರ್ಧೆಗೆ ನಾಮಕರಣ ಮಾಡಲಾಗಿರುವ ಕನ್ನಡ ಸಿನೆಮಾ ‘ರಂಗಿತರಂಗ’ ಲ್ಯಾಟರಲ್ ಪ್ರವೇಶ ಪಡೆದಿದೆ.

‘Rangitaranga’ brings sandalwood to the world; enters Oscar list-1ನಿರ್ದೇಶಕ ಅನೂಪ್ ಭಂಡಾರಿಯವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ ಆಸ್ಕರ್ ಸಮಿತಿ ಅಂತಿಮಗೊಳಿಸಿರುವ 305 ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿರುವ 305 ಚಿತ್ರಗಳ ಪಟ್ಟಿಯಲ್ಲಿ ಕನ್ನಡದ ಕೇರ್ ಆಫ್ ಫುಟ್ ಪಾತ್ 2 ಸ್ಥಾನ ಪಡೆದಿರುವುದು ಈಗಾಗಲೇ ತಿಳಿದ ವಿಚಾರವಾಗಿದೆ.

ಅನೂಪ್ ಭಂಡಾರಿಯವರ ರಂಗಿತರಂಗ ರಾಜ್ಯಾದ್ಯಂತ ಮಲ್ಟಿಫ್ಲೆಕ್ಸ್ ಗಳಲ್ಲಿ 25 ವಾರಗಳನ್ನು ಪೂರೈಸಿತ್ತು. ಆ ನಿಟ್ಟಿನಲ್ಲಿ ರಂಗಿತರಂಗ ದಾಖಲೆ ನಿರ್ಮಿಸಿತ್ತು. ವಿಕೆ ಪ್ರಕಾಶ್ ನಿರ್ಮಾಣದ ರಂಗಿತರಂಗ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶಿಸಿದ್ದರು. ನಿರೂಪ್ ಭಂಡಾರಿ, ಆವಂತಿಕಾ ಶೆಟ್ಟಿ, ರಾಧಿಕಾ ಚೇತನ್, ಸಾಯಿಕುಮಾರ್ ತಾರಾಗಣದಲ್ಲಿದ್ದರು. ರಂಗಿತರಂಗ ಜರ್ಮನಿ, ಕೆನಡಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ನಾರ್ವೆ, ಸಿಂಗಾಪುರ್, ಹಾಂಗ್ ಕಾಂಗ್, ಜಪಾನ್ ಸೇರಿದಂತೆ ವಿದೇಶಗಳಲ್ಲೂ ಬಿಡುಗಡೆಯಾಗಿತ್ತು.

ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಕನ್ನಡ ಸಿನಿಮಾ ರಂಗಿತರಂಗದ ಜತೆಗೆ ಮಲೆಯಾಳಂ ಸಿನೆಮಾ ‘ಜಲಂ’, ಕೊಂಕಣಿ ಸಿನೆಮಾ ‘ನಾಚೋಮ್ ಇಅ ಕುಂಪ್ಸಾಪುರ್’ ಕೂಡ ಅರ್ಹತೆಯ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು