ಮುಂಬಯಿ: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರು ಡೆಂಘೀ ಜ್ವರದಿಂದ ಬಳಲುತ್ತಿರುವುದಾಗಿ ವರದಿಗಳು ಹೇಳಿವೆ.
ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನ ಚರಿತ್ರೆ ಆಧಾರಿತ ಸಿನಿಮಾದಲ್ಲಿ ನಟಿಸುತ್ತಿರುವ ಶ್ರದ್ಧಾ ಕಪೂರ್ ಅವರು ಡೆಂಘೀ ಜ್ವರದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶ್ರದ್ಧಾ ಕಪೂರ್ ಅವರು ಸಂಪೂರ್ಣವಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೆಲವು ದಿನಗಳ ಬಳಿಕ ಅವರು ಮತ್ತೆ ಶೂಟಿಂಗ್ ಗೆ ಮರಳಲಿದ್ದಾರೆ ಎಂದು ಚಿತ್ರತಂಡವು ಹೇಳಿದೆ.