ಮುಂಬಯಿ: ಶ್ರೇಷ್ಠ ವ್ಯಕ್ತಿಗಳ ಜೀವನಾಧಾರಿತ ಚಿತ್ರಗಳಲ್ಲಿ ನಟಿಸಲು ತುಂಬಾ ಕಷ್ಟಪಡಬೇಕು ಎನ್ನುವುದು ಹೆಚ್ಚಿನ ನಟ-ನಟಿಯರಿಗೆ ತಿಳಿದಿದೆ. ಯಾಕೆಂದರೆ ಇಂತಹ ಚಿತ್ರಗಳಲ್ಲಿ ನಟಿಸಲು ಆ ವ್ಯಕ್ತಿಯ ಜೀವನವನ್ನು ಸರಿಯಾಗಿ ಅರಿತುಕೊಂಡು ನಟಿಸಬೇಕಾಗುತ್ತದೆ.
ಕೆಲವು ನಟನಟಿಯರು ಇಂತಹ ಚಿತ್ರಗಳಲ್ಲಿ ನಟಿಸಲು ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಅದರಲ್ಲೂ ಪ್ರಿಯಾಂಕಾ ಚೋಪ್ರಾ ಈಗಾಗಲೇ ಮಹಿಳಾ ಬಾಕ್ಸರ್ ಮೇರಿ ಕೋಮ್ ಜೀವನಾಧಾರಿತ ಚಿತ್ರದಲ್ಲಿ ನಟಿಸಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಪ್ರಿಯಾಂಕಾ ಈಗ ಅಥ್ಲೀಟ್ ಪಿ.ಟಿ. ಉಷಾ ಜೀವನಾಧಾರಿತ ಚಿತ್ರದಲ್ಲಿ ನಟಿಸುವರು.
ಪಿ.ಟಿ. ಉಷಾ ಚಿತ್ರದಲ್ಲಿ ನಟಿಸಲಿರುವ ಪ್ರಿಯಾಂಕಾ ಮೊದಲಿಗೆ ಓಟಗಾರ್ತಿ, ಬಳಿಕ ತಾಯಿ ಮತ್ತು ಕೋಚ್ ಹೀಗೆ ಮೂರು ರೂಪದಲ್ಲಿ ನಟಿಸಬೇಕಾಗಿದೆ.
ಜಾಹೀರಾತು ನಿರ್ದೇಶಕಿ ರೇವತಿ ವರ್ಮಾ ಅವರು ಪಿಟಿ ಉಷಾ ಜೀವನಾಧಾರಿತ ಚಿತ್ರ ನಿರ್ದೇಶಿಸಲಿದ್ದಾರೆ. ಎಆರ್ ರೆಹಮಾನ್ ಇದಕ್ಕೆ ಸಂಗೀತ ನಿರ್ದೇಶನ ಮಾಡಲಿರುವರು. ಆರು ತಿಂಗಳ ಬಳಿಕ ಚಿತ್ರ ಸೆಟ್ಟೇರಲಿದೆ. ಹಿಂದಿ, ಇಂಗ್ಲಿಷ್, ಮಲಯಾಳಂ, ಚೀನೀ ಹಾಗೂ ರಷ್ಯಾ ಭಾಷೆಗಳಲ್ಲಿ ಈ ಚಿತ್ರವು ನಿರ್ಮಾಣವಾಗುತ್ತಲಿದೆ.