ನಿರ್ದೇಶಕ, ನಟ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಅವರು ಭಾನುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯನ್ನು ರಿಷಬ್ ಶೆಟ್ಟಿ ಅವರು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಪತ್ನಿ ಜತೆಗಿನ ಖುಷಿಯಲ್ಲಿ ಸೆಲ್ಫಿ ತೆಗೆದುಕೊಂಡು ‘ಹೌದು… ಹೀರೋ’ ಎಂದು ಬರೆದುಕೊಂಡಿದ್ದಾರೆ.
2017ರಲ್ಲಿ ಫೆಬ್ರವರಿ 9ರಂದು ಕುಂದಾಪುರದ ಮೂಲದ ರಿಷಬ್ ತನ್ನ ತವರೂರಲ್ಲೇ ಶಿವಮೊಗ್ಗ ತೀರ್ಥಹಳ್ಳಿ ಮೂಲದ ಪ್ರಗತಿ ಶೆಟ್ಟಿ ಅವರ ಜತೆಗೆ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.