ರಾಜ್ಕುಮಾರ್ ರಾವ್ ತನ್ನ ನಿಜ ರೂಪ ಬದಲಿಸಿಕೊಂಡು ‘ರಾಬ್ತಾ’ ಸಿನಿಮಾಕ್ಕಾಗಿ ಗುರುತೇ ಸಿಗದಷ್ಟು ಬದಲಾಗಿದ್ದಾರೆ.
ರಾಜ್ ಅವರ ಹೊಸ ಅವತಾರದ ಕುರುಹು ರಾಬ್ತಾ ಸಿನಿಮಾದ ಟ್ರೇಲರ್ನಲ್ಲಿ ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ. ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಅದರಲ್ಲಿ ಇವರ ಹೊಸ ರೂಪದ ದರ್ಶನ ಮಾಡಿಸಲಾಗಿದೆ.
ರಾಬ್ತಾ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇವರ ವಯಸ್ಸು ಬರೋಬ್ಬರಿ 324 ವರ್ಷ! ‘ಇದೊಂದು ವಿಭಿನ್ನ ಪಾತ್ರ. ಪ್ರತಿದಿನ ಮೇಕಪ್ಗೆ ಐದು ಗಂಟೆ ತೆಗೆದುಕೊಳ್ಳುತ್ತಿದ್ದರು. ನನ್ನ ರೂಪವೇ ತಮಾಷೆಯಾಗಿತ್ತು’ ಎಂದು ಈ ಸಿನೆಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಹೇಳುತ್ತಾರೆ ರಾಜ್.