ಆಂಧ್ರಪ್ರದೇಶ: ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನ ಮತ್ತೊಂದು ಆವೃತ್ತಿಗೆ ತಯಾರಿ ನಡೆಯುತ್ತಿದೆ. ಈ ಮಧ್ಯೆ ಕಿಚ್ಚ ಸುದೀಪ್ ಅವರು ತೆಲುಗು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಿದ್ದಾರೆ.
ಹಿರಿಯ ನಟ ನಾಗಾರ್ಜುನ ತೆಲುಗು ಬಿಗ್ ಬಾಸ್ ಅನ್ನು ನಡೆಸಿಕೊಡುತ್ತಿದ್ದಾರೆ.
ನಾಗಾರ್ಜುನ ಅವರ ಜೊತೆ ಕಳೆದ ಸಮಯ ಮತ್ತು ಮನೆಯೊಳಗೆ ಹೋಗಿ ತೆಲುಗು ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಕಳೆದ ಕ್ಷಣ ಸುಮಧುರವಾಗಿತ್ತು ಮತ್ತು ಸಾಕಷ್ಟು ತಮಾಷೆಯಾಗಿತ್ತು ಎಂದು ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.
ತೆಲುಗು ಬಿಸ್ ಬಾಸ್ ಸ್ಟಾರ್ ಮಾ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದು, ಇಂದಯ ರಾತ್ರಿ 9 ಗಂಟೆಗೆ ಸುದೀಪ್ ಅವರ ಕಾರ್ಯಕ್ರಮ ಪ್ರಸಾರವಾಗಲಿದೆ.