ಬೆಂಗಳೂರು: ಶನಿವಾರ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ವಿಶೇಷವಾಗಿ ಸುದೀಪ್ ಮನೆಗೆ ಅತಿಥಿಯಾಗಿ ಬಂದ ಎಚ್ ಡಿ ಕೆ ಗೆ ನಟ ಸುದೀಪ್ ಅಡುಗೆ ಮಾಡಿ ಬಡಿಸಿದರು. ಶನಿವಾರ ಹುಟ್ಟು ಹಬ್ಬಕ್ಕೆ ದೂರವಾಣಿ ಮೂಲಕ ಶುಭಾಶಯ ತಿಳಿಸಿದ ಸುದೀಪ್ ತಮ್ಮ ಮನೆಗೆ ಬರುವಂತೆ ಆಹ್ವಾನ ನೀಡಿದ್ದರು. ಕುಮಾರಸ್ವಾಮಿ ಭಾನುವಾರ ಮಧ್ಯಾಹ್ನ ಸುದೀಪ್ ಅವರ ಮನೆಗೆ ಭೇಟಿ ನೀಡಿದ್ದರು.
ಸುಮಾರು ಎರಡು ಗಂಟೆಗಳ ಕಾಲ ಉಭಯ ಕುಶಲೋಪರಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸುದೀಪ್ ಅವರೇ ಅಡುಗೆ ಮಾಡಿ ಬಡಿಸಿದರು ಎಂದು ಮೂಲಗಳು ತಿಳಿಸಿವೆ.