ಆಗ್ರಾ: ಗಾಯಕಿ ಪಾಲಾಕ್ ಮುಖಾಲ್ ಸಹೋದರ ಪಾಲಾಶ್ ವಿರುದ್ಧ ತಾಜ್ ಮಹೋತ್ಸವ ವೇಳೆ ಹಲ್ಲೆ ಮಾಡಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕಳೆದ ತಿಂಗಳು ಆಗ್ರಾದಲ್ಲಿ ನಡೆದಂತಹ ತಾಜ್ ಮಹೋತ್ಸವದ ಆಯೋಜನಾ ಸಮಿತಿಯಲ್ಲಿದ್ದ ಸದಸ್ಯನ ಮೇಲೆ ಪಾಲಾಶ್ ಹಲ್ಲೆ ಮಾಡಿದ್ದಾನೆ ಎನ್ನುವ ಆರೋಪವಿದೆ.
ಪಾಲಾಶ್ ವಿರುದ್ಧ ವಿವಿಧ ಸೆಕ್ಷನ್ ಗಳಡಿ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಶೈಲೇಂದ್ರ ಸಿಂಗ್ ತಿಳಿಸಿದ್ದಾರೆ.
ತಾಜ್ ಮಹೋತ್ಸವದ ವೇಳೆ ಪಾಲಾಕ್ ತಾಯಿಗೆ ಸರಿಯಾದ ವ್ಯವಸ್ಥೆ ಮಾಡಿಲ್ಲವೆಂದು ಪಾಲಾಶ್ ಸಮಿತಿ ಸದಸ್ಯ ಸುಧೀರ್ ನರೈನ್ ಎಂಬವರ ಮೇಲೆ ಹಲ್ಲೆ ಮಾಡಿದ್ದರು.