News Karnataka Kannada
Tuesday, May 07 2024
ಮನರಂಜನೆ

ತಮ್ಮ ಪೋಷಕರು ಸೇರಿದಂತೆ 11 ಜನರ ವಿರುದ್ಧ ದೂರು ದಾಖಲಿಸಿದ ನಟ ವಿಜಯ್

Vijay Dalapthy Film 20092021
Photo Credit :

ಚೆನ್ನೈ: ತಮಿಳು ನಟ ವಿಜಯ್ ಅವರು ತಮ್ಮ ಪೋಷಕರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಬೆಳಗಿಗೆ ಬಂದಿದ್ದು, ಈ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಕೇಂದ್ರ ಸರ್ಕಾರದ ಪೆಟ್ರೋಲ್ ದರ ಏರಿಕೆ ವಿರುದ್ಧ ಮತದಾನದ ವೇಳೆ ಸೈಕಲ್ ನಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದ ವಿಜಯ್ ಭಾರಿ ಸುದ್ದಿಗೆ ಗ್ರಾಸವಾಗಿದ್ದರು. ವಿಜಯ್ ಈ ರೀತಿ ಮಾಡಿದ್ದರು ಎಂದು ಹೇಳಲಾಗಿತ್ತು. ಇದೀಗ ಇದರ ಬೆನ್ನಲ್ಲೇ ತಮ್ಮ ತಂದೆ ತಾಯಿ ಸೇರಿದಂತೆ 11ಜನರ ವಿರುದ್ಧ ವಿಜಯ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.

ವಿಜಯ್​ ತಂದೆ ಖ್ಯಾತ ನಿರ್ದೇಶಕ ಎಸ್​.ಎ. ಚಂದ್ರಶೇಖರ್​. ಅವರು ನಿರ್ದೇಶಕರಾಗಿದ್ದು ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅವರು ‘ಆಲ್​ ಇಂಡಿಯಾ ದಳಪತಿ ವಿಜಯ್​ ಮಕ್ಕಳ್​ ಇಯಕ್ಕಮ್​’ ಪಕ್ಷ ಆರಂಭಿಸಿದ್ದರು. ಆದರೆ, ಅದು ವಿಜಯ್​ಗೆ ಇಷ್ಟವಿಲ್ಲ. ಈ ಕಾರಣಕ್ಕೆ ರಾಜಕೀಯದಲ್ಲಿ ತಮ್ಮ ಮತ್ತು ತಮ್ಮ ಫ್ಯಾನ್​ ಕ್ಲಬ್​ನ ಹೆಸರು ಬಳಕೆ ಮಾಡದಂತೆ ತಡೆಕೋರಬೇಕು ಎಂದು ವಿಜಯ್​ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು