News Karnataka Kannada
Monday, May 06 2024
ಮನರಂಜನೆ

‘ಜಿಗರ್ ಥಂಡ’ ಚಿತ್ರದ ಆಡಿಯೋ ರಿಲೀಸ್‌‌: ಜೊತೆಯಾಗಿ ಕಾಣಿಸಿಕೊಂಡ ಸುದೀಪ್-ಪ್ರಿಯಾ

Photo Credit :

'ಜಿಗರ್ ಥಂಡ' ಚಿತ್ರದ ಆಡಿಯೋ ರಿಲೀಸ್‌‌: ಜೊತೆಯಾಗಿ ಕಾಣಿಸಿಕೊಂಡ ಸುದೀಪ್-ಪ್ರಿಯಾ

ಪರಸ್ಪರ ಒಪ್ಪಿಕೊಂಡು ವಿಚ್ಛೇದನ ನೀಡಲು ಮುಂದಾಗಿರುವ ಜೋಡಿ ನಟ ಸುದೀಪ್ ಮತ್ತು ಪ್ರಿಯಾ ಜಿಗರ್ ಥಂಡ’ ಚಿತ್ರದ ಆಡಿಯೋ ರಿಲೀಸ್‌‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಸುದೀಪ್ ನಿರ್ಮಾಣ ಮಾಡಿರುವ ‘ಜಿಗರ್ ಥಂಡ’ ಚಿತ್ರದ ಆಡಿಯೋ ರಿಲೀಸ್‌‌ನಲ್ಲಿ ನಟ ಸುದೀಪ್ ಮತ್ತು ಪತ್ನಿ ಪ್ರಿಯಾ ಜೊತೆಯಾಗಿ ಕಾಣಿಸಿಕೊಂಡು ಎಲ್ಲರನ್ನು ಬೆರಗುಗೊಳಿಸಿದ್ದಾರೆ. ಕಾರ್ಯಕ್ರಮಕ್ಕೆ ಸುದೀಪ್ ಮೊದಲೇ ಆಗಮಿಸಿದ್ದು, ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ನಂತರ ಆಗಮಿಸಿದ್ದಾರೆ. ಅಪ್ಪನನ್ನು ಕಂಡ ಮಗಳು ಸಾನ್ವಿ ಸುದೀಪ್ ಹತ್ತಿರ ಓಡಿ ಬಂದು ಮಾತನಾಡಿಸಿ ತಾಯಿ ಹತ್ತಿರ ಕರೆದುಕೊಂಡು ಹೋಗಿದ್ದಾಳೆ. ಮೂವರು ಒಟ್ಟಿಗೆ ಖುಶಿಯಾಗಿ ಮಾತನಾಡುವ ದೃಶ್ಯ ನೆರೆದವರಿಗೆಲ್ಲರೂ ಆಶ್ಚರ್ಯ ಹಾಗೂ ಸಂತಸವಾಯಿತು.

ವೇದಿಕೆಯಲ್ಲಿ ಸುದೀಪ್ ಅವರು ಚಿತ್ರಕ್ಕೆ ಸಹಕರಿಸಿದ ಪತ್ನಿ ಪ್ರಿಯಾಗೆ ಥ್ಯಾಂಕ್ಸ್ ಹೇಳಿದ್ದಾರೆ.  ಕಾರ್ಯಕ್ರಮದಲ್ಲಿ ಸುದೀಪ್ ತಂದೆ ಸಂಜೀವ್ , ನಟ ರವಿಚಂದ್ರನ್, ವಿಲನ್ ರವಿಶಂಕರ್ ಸೇರಿದಂತೆ ‘ಜಿಗರ್ ಥಂಡ’ ತಂಡ ಆಡಿಯೋ ರಿಲೀಸ್’ನಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು