News Karnataka Kannada
Monday, May 06 2024
ಮನರಂಜನೆ

ಚಲನಚಿತ್ರ ಪಿತಾಮಹ ಫಾಲ್ಕೆಯವರ ಹುಟ್ಟುಹಬ್ಬದ ಸವಿನೆನಪು

Photo Credit :

ಚಲನಚಿತ್ರ ಪಿತಾಮಹ ಫಾಲ್ಕೆಯವರ ಹುಟ್ಟುಹಬ್ಬದ ಸವಿನೆನಪು

ಭಾರತೀಯ ಚಲನಚಿತ್ರದ ಪಿತಾಮಹ ಎಂದೇ ಕರೆಸಿಕೊಳ್ಳುವ ದಾದಾ ಸಾಹೇಬ್ ಫಾಲ್ಕೆ ಅವರ ಹುಟ್ಟುಹಬ್ಬದ ಸವಿ ನೆನಪನ್ನು ಇಂದು (ಎಪ್ರಿಲ್ 30) ನಾವು ಆಚರಿಸುತ್ತಿದ್ದೇವೆ. ದಾದಾ ಸಾಹೇಬ್ ಫಾಲ್ಕೆಯವರ 148ನೇ ವರ್ಷದ ಜನ್ಮದಿನದ ಅಂಗವಾಗಿ ಗೂಗಲ್ ‘ಡೂಡಲ್’ ನಮನ ಸಲ್ಲಿಸಿದೆ.

ಚಿತ್ರರಂಗದಲ್ಲಿ ದಾದಾ ಸಾಹೇಬ್ ಫಾಲ್ಕೆ ಎಂದೇ ಪ್ರಸಿದ್ದಿ ಪಡೆದಿರುವ ಇವರ ಮೂಲ ಹೆಸರು ದುಂಡಿರಾಜ್ ಗೋವಿಂದ ಫಾಲ್ಕೆ. 1870ರ ಏಪ್ರಿಲ್‌ 30ರಂದು ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ತ್ರಯಂಬಕೇಶ್ವರದಲ್ಲಿ ಜನಿಸಿದ್ದ ಇವರು 1912ರಲ್ಲಿ ಮೊಟ್ಟ ಮೊದಲ ಬಾರಿಗೆ ‘ರಾಜಾ ಹರಿಶ್ಚಂದ್ರ’ ಎಂಬ ಮರಾಠಿ ಸಿನಿಮಾ ನಿರ್ದೇಶನ ಮಾಡಿದರು. ಆ ಮೂಲಕ ದೇಶದಲ್ಲಿ ಸಿನಿಮಾ ನಿರ್ಮಾಣ ಪರಂಪರೆಗೆ ನಾಂದಿ ಹಾಡಿದ್ದರು.

ಮುಂಬಯಿಯ ವಿಲ್ಸನ್ ಕಾಲೇಜಿನಲ್ಲಿ 1885 ರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಕೆಲಸ ಸಿಕ್ಕಿದ ನಂತರ ಅವರು ತಮ್ಮ ಕುಟುಂಬ ಸಮೇತ ಮುಂಬಯಿಗೆ ಬಂದರು. ಮುಂಬಯಿನಲ್ಲಿರುವ ಪ್ರಸಿದ್ಧ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಚಿತ್ರಕಲಾ ತರಗತಿಗೆ ಪ್ರವೇಶ ಪಡೆದ ಮೇಲೆ ಅವರ ಚಿತ್ರಾಸಕ್ತಿ ಶುರು ಆಯಿತು.

ಶುದ್ಧ ಭಾರತೀಯ ಸಿನಿಮಾ ಮಾಡಬೇಕೆಂಬ ಕನಸಿನಿಂದ ತಮ್ಮ ಎಲ್ಲ ವಸ್ತುಗಳನ್ನು ಅಡವಿಟ್ಟು, ಚಿತ್ರ ನಿರ್ಮಾಣಕ್ಕೆ ಬೇಕಾಗುವ ಯಂತ್ರೋಪಕರಣಗಳನ್ನು ಖರೀದಿಸಲು ಲಂಡನ್ನಿಗೆ ಹೋದರು. ಅಲ್ಲಿ ಸಿನಿಮಾ ನಿರ್ಮಾಪಕ ಸಿಸಿಲ್ ಅವರ ಜೊತೆಗೆ ಚಲನಚಿತ್ರ ನಿರ್ಮಾಣದ ಎಲ್ಲಾ ಭಾಗಗಳನ್ನು ಅಧ್ಯಯನ ಮಾಡಿ ಮರಳಿ ಬಂದರು.

ಸಿನಿಮಾ ಮಾಡುವ ಗೀಳು ಹತ್ತಿಸಿಕೊಂಡಿದ್ದ ಫಾಲ್ಕೆ ಅವರು ತಮ್ಮ ಹೆಂಡತಿಯ ಒಡವೆಯನ್ನು ಕೂಡ ಅಡವಿಟ್ಟು ಸಿನಿಮಾ ಮಾಡಿದ ಪ್ರಸಂಗ ಇವರ ಬಾಳಿನಲ್ಲಿ ನಡೆದಿದೆ. 1913, ಮೇ 13 ರಂದು ‘ರಾಜಾ ಹರಿಶ್ಚಂದ್ರ’ ಸಿನಿಮಾ ಬಿಡುಗಡೆಯಾಯಿತು. ಇಡೀ ಭಾರತ ಚಿತ್ರರಂಗದಲ್ಲಿ ತೆರೆಗೆ ಬಂದ ಮೊದಲ ಸಿನಿಮಾ ಇದಾಯಿತು.

ಹಣ ಹೊಂದಿದವರು ಮುಂಬೈನ ಕಾರೋನೇಷನ್ ಚಿತ್ರಮಂದಿರದ ಒಳಗೆ ಸಿನಿಮಾ ನೋಡುತ್ತಿದ್ದರೆ ಹಣವಿಲ್ಲದವರು ಥಿಯೇಟರ್ ಹೊರಗೆ ಕುತೂಹಲದಿಂದ ಗುಂಪು ಕಟ್ಟಿದ್ದರು. ತೆರೆ ಮೇಲೆ ಭಾರತೀಯ ಕಲಾವಿದರನ್ನು ನೋಡಿ ಎಲ್ಲರೂ ಬೆರಗಾದರು. ಆದರೆ ಸಿನಿಮಾಗೆ ದೊಡ್ಡ ಗೆಲುವು ಸಿಗಲಿಲ್ಲ.

ತದನಂತರ ‘ಸತ್ಯವಾನ್ ಸಾವಿತ್ರಿ’, ‘ಮೋಹಿನಿ ಬಸ್ಮಾಸುರ್’, ‘ಶ್ರೀಕೃಷ್ಣ ಜನ್ಮ’, ‘ಲಂಕಾ ದಹನ್’ ಮುಂತಾದ ಪ್ರಮುಖ ಸಿನಿಮಾ ಮಾಡಿದರು. ಭಾರತ ಸರ್ಕಾರ ಫಾಲ್ಕೆ ಅವರ ಹೆಸರಿನಲ್ಲಿ ನೀಡುವ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
189

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು